ಕೆಂಟ್ ವ್ಯಾಕ್ಯೂಮ್ ಕ್ಲೀನರ್

ಆಧುನಿಕ ಬ್ಯಾಗ್ ರಹಿತ ತಂತ್ರಜ್ಞಾನ HEPA ಫಿಲ್ಟ್ರೇಶನ್ ಜೊತೆಗೆ

ವಿಂಗಡಿಸು
ಫಿಲ್ಟರ್

ಇದರ ಆಧಾರದಲ್ಲಿ ವಿಂಗಡಿಸು

ಇದರ ಆಧಾರದಲ್ಲಿ ವಿಂಗಡಿಸು
    ಫಿಲ್ಟರ್
ಖಾಲಿ ಮಾಡು ಕ್ಲಿಯರ್

ಬೆಲೆ

INR 4500 - INR 12000

ವೈಶಿಷ್ಟ್ಯಗಳು

ಅಂಕಗಳ ಆಧಾರದಲ್ಲಿ ವಿಂಗಡಿಸು

ವಿಧಗಳ ಆಧಾರದಲ್ಲಿ ಶೋಧಿಸು

ಅನ್ವಯಿಸಿ

ಜನಪ್ರಿಯ ವ್ಯಾಕ್ಯೂಮ್ ಕ್ಲೀನರ್ ರಿವ್ಯೂಗಳು

ಕೆಂಟ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್

ಕೆಂಟ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್

5.0 4 ರೇಟಿಂಗ್ಸ್ ಮತ್ತು ರಿವ್ಯೂಸ್

7000

ಸೈಕ್ಲೋನಿಕ್
ಕ್ಯಾನಿಸ್ಟರ್
5 ಉತ್ತಮ ಮತ್ತು ಉಪಯುಕ್ತ ಮಶಿನ್

ಪೊರಕೆ ಹಿಡಿದು ಮನೆ ಸ್ವಚ್ಛಗೊಳಿಸುವುದು ಎಂದರೆ ಒಂದು ತಲೆನೋವಿನ ಕೆಲಸ. ಹಾಗಾಗಿ ನಾನು ಒಂದು ಬಲಶಾಲಿಯಾದ ವ್ಯಾಕ್ಯೂಮ್ ಕ್ಲೀನರಿಗಾಗಿ ಆನ್‌ಲೈನಿನಲ್ಲಿ ಹುಡುಕಲಾರಂಭಿಸಿದೆ. ನನಗೆ ಕೆಂಟ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಕಂಡುಬಂತು. ಇದು ಕಡಿಮೆ ಸದ್ದು ಮಾಡುವ ವ್ಯಾಕ್ಯೂಮ್ ಕ್ಲೀನರ್ ಆಗಿದ್ದು, ಒಂದು ಅತ್ಯಂತ ಉಪಯಕ್ತ ಮಶಿನ್ ಆಗಿದೆ. ಇದರಲ್ಲಿ HEPA ಫಿಲ್ಟರ್ ಇದ್ದು, ಧೂಳು ಮತ್ತು ಕೊಳೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಈ ವ್ಯಾಕ್ಯೂಮ್ ಕ್ಲೀನರ್ ನನಗಿಷ್ಟವಾಯಿತು. ಒಳ್ಳೆಯ ಉತ್ಪನ್ನ!

ಮೋಹಿತ್ ಶರ್ಮ | ಬೆಂಗಳೂರು
5 ಕಾಂಪ್ಯಾಕ್ಟ್ ಮತ್ತು ಶಕ್ತಿಯುತ ವ್ಯಾಕ್ಯೂಮ್ ಕ್ಲೀನರ್

ನಾನು ಒಂದು ತಿಂಗಳ ಹಿಂದೆ ಈ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿದೆ ಮತ್ತು ನನ್ನ ನಿರೀಕ್ಷೆಯಂತೆ ಇದು ಕೆಲಸ ಮಾಡುತ್ತಿದೆ. ಅತ್ಯುತ್ತಮ ಉತ್ಪನ್ನ ಮತ್ತು ಅದರ ವಿನ್ಯಾಸ ಗುರುತರವಾಗಿದೆ. ಜೊತೆಗಿರುವ ಲಗತ್ತುಗಳು ಉತ್ತಮವಾಗಿದ್ದು ಧೂಳು ಸ್ವಚ್ಛಗೊಳಿಸಲು ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರ್ ಆಗಿದೆ. ಏರ್ ಡಸ್ಟ್ ಕ್ಲೀನರ್ ವ್ಯಾಕ್ಯೂಮ್ ಅತ್ಯಂತ ಶಕ್ತಿಯುತವಾಗಿದ್ದು, ಅದು ಧೂಳನ್ನು ನಿವಾರಿಸಿ ಮೇಲ್ಮೈಯನ್ನು ಕೊಳೆರಹಿತವಾಗಿಸಬಲ್ಲದು. ನಾನು ನನ್ನ ಮನೆಗಾಗಿ ಇನ್ನೊಂದಕ್ಕೆ ಆರ್ಡರ್ ಮಾಡಿದ್ದೇನೆ. ನೀವು ಸಹ ಒಂದನ್ನು ಖರೀದಿ ಮಾಡಬಹುದು!

ನವೀನ್ ಕುಮಾರ್ | ನವ ದೆಹಲಿ
ಬೆಡ್ ಅಪ್‌ಹೋಲೆಸ್ಟ್ರಿ ವ್ಯಾಕ್ಯೂಮ್ ಕ್ಲೀನರ್

ಬೆಡ್ ಅಪ್‌ಹೋಲೆಸ್ಟ್ರಿ ವ್ಯಾಕ್ಯೂಮ್ ಕ್ಲೀನರ್

4.8 6 ರೇಟಿಂಗ್ಸ್ ಮತ್ತು ರಿವ್ಯೂಸ್

7500


ಹ್ಯಾಂಡ್‌ಹೆಲ್ಡ್ ::
5 ಉತ್ತಮ ಉತ್ಪನ್ನ, ಪರಿಣಾಮಕಾರೀ UV ಲ್ಯಾಂಪ್

ಹಾಸಿಗೆ ಮತ್ತು ಸೋಫಾ ಸ್ವಚ್ಛಗೊಳಿಸುವುದಕ್ಕಾಗಿ ನಾನೊಂದು ವ್ಯಾಕ್ಯೂಮ್ ಕ್ಲೀನರಿಗಾಗಿ ಹುಡುಕಾಡುತ್ತಿದ್ದೆ. ಆಗ ನನಗೆ ಕೆಂಟ್ ಅಪ್‌ಹೋಲೆಸ್ಟ್ರಿ ವ್ಯಾಕ್ಯೂಮ್ ಕ್ಲೀನರ್ ಬಗ್ಗೆ ತಿಳಿದುಬಂತು. ನನಗೆ ಈ ಸೋಫಾ ವ್ಯಾಕ್ಯೂಮ್ ಕ್ಲೀನರ್ ಪರಿಣಾಮಕಾರಿ ಎನ್ನಿಸಿತು ಏಕೆಂದರೆ, ಅದರಲ್ಲಿ UV ಲ್ಯಾಂಪ್ ಇದೆ. ಈಗ ನಿಮ್ಮ ಹಾಸಿಗೆ ಅಥವಾ ಸೋಫಾದ ಮೇಲೆ ಯಾವುದೇ ಬ್ಯಾಕ್ಟೀರಿಯಾ, ವೈರಸ್ ಅಥವಾ ಸಿಸ್ಟ್ಸ್ ಇಲ್ಲ, ಈ ಉಪಕರಣ ನನಗಿಷ್ಟವಾಯಿತು. ಖರೀದಿಗೆ ತಕ್ಕ ಮೌಲ್ಯ ಸಿಕ್ಕಿದೆ!

ನಿಧಿ ಮೋದಿ | ಹೈದರಾಬಾದ್
5 ಬಲಶಾಲಿ ಮತ್ತು ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರ್

ಮೇಲ್ಮೈ ಸ್ವಚ್ಛಗೊಳಿಸಲು ನನ್ನಲ್ಲೊಂದು ವ್ಯಾಕ್ಯೂಮ್ ಕ್ಲೀನರ್ ಇದೆ, ಆದರೆ ಹಾಸಿಗೆ ದಿಂಬು ಸ್ವಚ್ಛಗೊಳಿಸಲು ನಾನು ಒಂದು ಪುಟ್ಟ, ಹ್ಯಾಂಡಿಯಾಗಿರುವುದಕ್ಕಾಗಿ ಹುಡುಕುತ್ತಿದ್ದೆ. ಆನ್‌ಲೈನಿನಲ್ಲಿ ಸುದೀರ್ಘ ಹುಡುಕಾಟದ ನಂತರ ನನಗೆ ಕೆಂಟ್ ಬೆಡ್ ಎಂಡ್ ಅಪ್‌ಹೋಲೆಸ್ಟ್ರಿ ವ್ಯಾಕ್ಯೂಮ್ ಕ್ಲೀನರ್ ಕಣ್ಣಿಗೆ ಬಿತ್ತು. ಇದೊಂದು ಅತ್ಯುತ್ತಮ ಹಾಸಿಗೆ ವ್ಯಾಕ್ಯೂಮ್ ಕ್ಲೀನರ್. ಇದು ಹ್ಯಾಂಡಿಯಾಗಿದ್ದು, ಹಾಸಿಗೆ ಮತ್ತು ದಿಂಬುಗಳನ್ನು ಸ್ವಚ್ಛಗೊಳಿಸುವಷ್ಟು ಶಕ್ತಿಯುತವಾಗಿದೆ. ಈ ಉತ್ಪನ್ನವನ್ನು ಬಳಸುತ್ತಿರುವುದು ನನಗೆ ಖುಷಿಕೊಟ್ಟಿದೆ ಮತ್ತು ಇತರರಿಗೂ ಇದನ್ನು ನಾನು ಶಿಫಾರಸು ಮಾಡುತ್ತೇನೆ.

ನವೀನ್ ಪಾಠಕ್ | ಮುಂಬಯಿ
ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್

ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್

4.7 ರೇಟಿಂಗ್ಸ್ ಮತ್ತು ರಿವ್ಯೂಸ್

8500

ಸೈಕ್ಲೋನಿಕ್
ವೆಟ್ ಎಂಡ್ ಡ್ರೈ
5 ಉತ್ತಮ ವ್ಯಾಕ್ಯೂಮ್ ಕ್ಲೀನರ್

3 ತಿಂMಗಳ ಹಿಂದೆ ಈ ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿದೆ ಮತ್ತು ಇದು ಹಣಕ್ಕೆ ಸರಿಯಾದ ಬೆಲೆ. ಇದು ಅತ್ಯುತ್ತಮ ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್ ಆಗಿದ್ದು, ಇದಕ್ಕೆ ಒಳ್ಳೆಯ ಸಕ್ಷನ್ ಬಲ ಇದೆ. ನೋಡಲು ಇದು ಒಂದು ರೋಬೋ ತರಹ ಇದೆ ಮತ್ತು ಬಳಸುವುದು ಬಹಳ ಸುಲಭ. ಇದನ್ನು ನಾನು ಪ್ರತಿನಿತ್ಯವೂ ಉಪಯೋಗಿಸುತ್ತಿದ್ದೇನೆ. ಇದು ಹ್ಯಾಂಡಿಯಾಗಿದ್ದು, ಬಳಕೆದಾರ ಸ್ನೇಹಿಯಾಗಿದೆ. ಇದನ್ನು ಎಲ್ಲರಿಗೂ ಶಿಫಾರಸು ಮಾಡುತ್ತೇನೆ.

ಪ್ರಶಾಂತ್ ಮೋದಿ | ಪುಣೆ
5 ಹಣಕ್ಕೆ ಅತ್ಯುತ್ತಮ ಬೆಲೆ

ನಾನು ಹೇಳಲೇ ಬೇಕು, ನಾನು ಈ ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್ ಬಳಸಿ ಸಂಪೂರ್ಣ ಸಂಪ್ರೀತಳಾಗಿದ್ದೇನೆ. ಇದು ಅಧಿಕ ದಕ್ಷತೆಯ ಮೋಟರ್ ಹೊಂದಿದ್ದು, ಪ್ರಬಲ ಸಕ್ಷನ್ ಬಲ ಹೊಂದಿದೆ ಮತ್ತು ಅದು ಎಲ್ಲಾ ಮೂಲೆಗಳಿಂದಲೂ ಧೂಳನ್ನು ಎತ್ತಿಹಾಕಬಲ್ಲದು. ಬ್ಲೋಯರ್ ಫಂಕ್ಷನ್ ಇರುವ ವ್ಯಾಕ್ಯೂಮ್ ಕ್ಲೀನರ್ ಸಹ ಅತ್ಯುತ್ತಮವಾಗಿದೆ ಮತ್ತು ನಾನದನ್ನು ಬಳಸಿ ಸಂತೃಪ್ತಳಾಗಿದ್ದೇನೆ. ಅತ್ಯುತ್ತಮ ಉತ್ಪನ್ನ.

ನೀತಾ ಪಂಡಿತ್ | ಕೊಲ್ಕೊತಾ
ಫೋರ್ಸ್ ಸೈಕ್ಲೋನಿಕ್ ವ್ಯಾಕ್ಯೂಂ ಕ್ಲೀನರ್

ಫೋರ್ಸ್ ಸೈಕ್ಲೋನಿಕ್ ವ್ಯಾಕ್ಯೂಂ ಕ್ಲೀನರ್

5.0 4 ರೇಟಿಂಗ್ಸ್ ಮತ್ತು ರಿವ್ಯೂಸ್

6500

ಸೈಕ್ಲೋನಿಕ್
ಕ್ಯಾನಿಸ್ಟರ್
5 ಹಣಕ್ಕೆ ತಕ್ಕ ಬೆಲೆ

ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸುವುದು ನೀವು, ನಾನು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಸ್ವಚ್ಛಗೊಳಿಸಲು ಪೊರಕೆಯನ್ನು ಮಾತ್ರ ಬಳಸುವುದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ, ನಾನು ಧೂಳು ಹೊಡೆಯಲು ವ್ಯಾಕ್ಯೂಮ್ ಕ್ಲೀನರ್ ಖರೀದಿಸುವ ಆಲೋಚನೆ ಮಾಡಿದೆ. ನಾನು ಕೆಂಟ್ ಫೋರ್ಸ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಖರೀದಿ ಮಾಡಿದೆ. ಅದು ನನ್ನ ಕೆಲಸವನ್ನು ಸುಲಭವಾಗಿಸಿತು. ನಾನು ಈ ತಂತ್ರಜ್ಞಾನವನ್ನು ಬಹುವಾಗಿ ಮೆಚ್ಚಿದ್ದೇನೆ. ಇದು ಹಣಕ್ಕೆ ತಕ್ಕ ಮೌಲ್ಯ ಮತ್ತು ಬಹಳ ಉಪಯುಕ್ತ.

ಕವಿತಾ ಪ್ರಧಾನ್ | ಚೆನ್ನೈ
5 ಅತ್ಯುತ್ಕೃಷ್ಟ ಉತ್ಪನ್ನ

ಇದೊಂದು ಅತ್ಯುತ್ಕೃಷ್ಟ ಉತ್ಪನ್ನ. ನಾನಿದನ್ನು 2 ತಿಂಗಳ ಹಿಂದೆ ಖರೀದಿಸಿದೆ ಮತ್ತು ಇದು ಬಹಳ ಉಪಯುಕ್ತವೆನ್ನುವುದನ್ನು ಕಂಡುಕೊಂಡೆ. ಈಗ ಪೊರಕೆಯ ಬಳಕೆ ಇಲ್ಲ. HEPA ಫಿಲ್ಟರ್ ಇರುವ ಕೇವಲ ಈ ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರ್ ನನ್ನ ಕೆಲಸವನ್ನು ಸುಲಭವಾಗಿಸಿದೆ. ನನ್ನನ್ನು ನಂಬಿ, ನೀವು ನಿಮಗೊಂದು ಖರೀದಿಸಬಹುದು.

ಮುಕೇಶ್ ಪಾಂಡೆ | ಪಾಟ್ನಾ
ವಿಝರ್ಡ್ ವ್ಯಾಕ್ಯೂಂ ಕ್ಲೀನರ್

ವಿಝರ್ಡ್ ವ್ಯಾಕ್ಯೂಂ ಕ್ಲೀನರ್

4.7 4 ರೇಟಿಂಗ್ಸ್ ಮತ್ತು ರಿವ್ಯೂಸ್

5000

ಸೈಕ್ಲೋನಿಕ್
ಕ್ಯಾನಿಸ್ಟರ್
5 ನಾನು ಉಪಯೊಗಿಸಿರುವ ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರುಗಳಲ್ಲಿ ಒಂದು

ನಾನೊಂದು ಹಗುರವಾದ, ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರಿಗಾಗಿ ಹುಡುಕಾಡುತ್ತಿದ್ದೆ, ಏಕೆಂದರೆ ಅವು ಬಳಸಲು ಸುಲಭ. ಆಗ ನನಗೆ ಕೆಂಟ್ ವಿಝರ್ಡ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಕಣ್ಣಿಗೆ ಬಿತ್ತು. ಬೇರೆ ಬೇರೆ ವ್ಯಾಕ್ಯೂಮ್ ಕ್ಲೀನರುಗಳ ಗುಣಲಕ್ಷಣಗಳು ಮತ್ತು ದರವನ್ನು ಹೋಲಿಸಿ ನೋಡಿದ ನಂತರ ನಾನು ಕೆಂಟ್ ವಿಝರ್ಡ್ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿದೆ. ಈ ವ್ಯಾಕ್ಯೂಮ್ ಕ್ಲೀನರಿನಲ್ಲಿರುವ ಕಾಂಪ್ಯಾಕ್ಟ್ ವಿನ್ಯಾಸ ಮತ್ತು FOAM ಫಿಲ್ಟರ್ ತಲುಪಲು ಕಷ್ಟಸಾಧ್ಯವಾದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ಸುಲಭವಾಗಿಸುತ್ತದೆ.

ಸ್ಮೃತಿ ಗುಪ್ತ | ಲಕ್ನೋ
5 ಬಳಕೆಗೆ ಸುಲಭದ ಮತ್ತು ಹ್ಯಾಂಡಿ ಉತ್ಪನ್ನ

ನಾನು ಎರಡು ತಿಂಗಳ ಹಿಂದೆ ಕೆಂಟ್ ವಿಝರ್ಡ್ ವ್ಯಾಕ್ಯೂಮ್ ಕ್ಲೀನರ್ ಖರೀದಿಸಿದೆ ಮತ್ತು ನಿಜವಾಗಿಯೂ ನನಗೆ ಈ ಉತ್ಪನ್ನದಿಂದ ಸಂತಸವಾಗಿದೆ. ಅದರ ಅತ್ಯುತ್ತಮ ವಿಷಯವೆಂದರೆ, ಈ ವ್ಯಾಕ್ಯೂಮ್ ಕ್ಲೀನರ್ ನೆಲಹಾಸನ್ನು ಸ್ವಚ್ಛಗೊಳಿಸುವುದಕ್ಕೆ ಅತ್ಯಂತ ಸೂಕ್ತ. ಅದರ ಸಕ್ಷನ್ ಬಲ ಮತ್ತು ಕಾರ್ಪೆಟ್ ಬ್ರಶ್‌ಗಳು, ನೆಲಹಾಸನ್ನು ಮತ್ತು ಸ್ವಚ್ಛಗೊಳಿಸಲು ಕಷ್ಟಕರವಾದ ಸ್ಥಾನಗಳನ್ನೂ ದಕ್ಷತೆಯೊಂದಿಗೆ ಸ್ವಚ್ಛಗೊಳಿಸುತ್ತವೆ, ಈ ಉತ್ಪನ್ನವನ್ನು ಖಂಡಿತವಾಗಿಯೂ ಶಿಫಾರಸು ಮಾಡುವೆ.

ಅನು ಪಾಂಡೆ | ಅಹಮದಾಬಾದ್


ವ್ಯಾಕ್ಯೂಮ್ ಕ್ಲೀನರ್

ಇಂದಿನ ಜಗತ್ತಿನಲ್ಲಿ ಒಂದು ಆರೋಗ್ಯಕರ ಮತ್ತು ಸ್ವಚ್ಛ ಪರಿಸರ ಅತ್ಯಗತ್ಯ. ಆದರೆ ಹೆಚ್ಚುತ್ತಿರುವ ಒಳಾಂಗಣ ಮಾಲಿನ್ಯದೊಂದಿಗೆ, ಮನೆಯನ್ನು ಸ್ವಚ್ಛಗೊಳಿಸುವ ಹೆಚ್ಚಿನ ಸಾಂಪ್ರದಾಯಿಕ ವಿಧಾನಗಳು ಪರಿಣಾಮಕಾರಿಯಾಗಲಾರವು. ಆರೋಗ್ಯಯುತ ಮನೆಯಲ್ಲಿ ಬದುಕಲು ಸಾಧ್ಯವಾಗುವಂತೆ, ನೆಲ, ಪೀಠೋಪಕರಣಗಳ ಮೇಲ್ಮೈಗಳಿಂದ ಧೂಳು ಮತ್ತು ಕೊಳೆಯನ್ನು ಸೆರೆಹಿಡಿಯುವಂತಹ ಸಾಧನ ಎಲ್ಲರಿಗೂ ಬೇಕಿದೆ. ಮನೆಬಳಕೆಗೆ ತಕ್ಕುದಾದ ಶಕ್ತಿಯುತ ವ್ಯಾಕ್ಯೂಮ್ ಕ್ಲೀನರ್ ಖರೀದಿ ಮಾಡುವುದು ಇದಕ್ಕಿರುವ ಪರಿಹಾರ. ಏಕೆಂದರೆ, ಈಗ ಧೂಳು ಹೊಡೆದು ಸ್ವಚ್ಛಮಾಡುವ ಸಾಂಪ್ರದಾಯಿಕ ವಿಧಾನಗಳು ಪರಿಣಾಮಕಾರಿಯಾಗುತ್ತಿಲ್ಲ.

ವ್ಯಾಕ್ಯೂಮ್ ಕ್ಲೀನರ್ಸ್ ಎಂದರೇನು?

ವ್ಯಾಕ್ಯೂಮ್ ಕ್ಲೀನರುಗಳೆಂದರೆ, ಮನೆಯ ಉಪಕರಣಗಳಾಗಿದ್ದು, ಅವುಗಳನ್ನು ಸೋಫಾ, ಹಾಸಿಗೆ, ನೆಲಹಾಸು, ನೆಲಗಳು ಮತ್ತು ತಲುಪಲಸಾಧ್ಯವಾದ ಮೂಲೆಗಳಿಂದ ಧೂಳು ಹೊಡೆಯಲು ಬಳಸಲಾಗುತ್ತದೆ. ಮನೆಯನ್ನು ಸ್ವಚ್ಛವಾಗಿರಿಸಲು ಉಪಯೋಗಿಸುವ ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರುಗಳು ಜನಪ್ರಿಯವಾದ ಹ್ಯಾಂಡ್‌ಹೆಲ್ಡ್, ವೆಟ್ ಎಂಡ್ ಡ್ರೈ ಮತ್ತು ಕ್ಯಾನಿಸ್ಟರ್ ಮಾದರಿಗಳಲ್ಲಿ ಬರುತ್ತವೆ. ವ್ಯಾಕ್ಯೂಮ್ ಕ್ಲೀನರಿನ ಬೆಲೆಯು ಅದರಲ್ಲಿ ಬಳಸಲಾಗಿರುವ ತಂತ್ರಜ್ಞಾನವನ್ನು ಹೊಂದಿಕೊಂಡಿದೆ. ಭಾರತದಲ್ಲಿ ಅತ್ಯುತ್ತಮವಾಗಿರುವ ವ್ಯಾಕ್ಯೂಮ್ ಕ್ಲೀನರುಗಳೆಂದರೆ ಸೈಕ್ಲೋನಿಕ್ ಸಕ್ಷನ್, ಏರ್ ಬ್ಯಾಗ್ ರಹಿತ HEPA ಏರ್ ಫಿಲ್ಟರ್ ಮತ್ತು UV ಡಿಸಿನ್ಫೆಕ್ಷನ್ ತಂತ್ರಜ್ಞಾನಗಳ ಸಂಯೋಜನೆಯನ್ನು ಬಳಸಿರುವಂತಹವು.

ವ್ಯಾಕ್ಯೂಮ್ ಕ್ಲೀನರ್ ಒಂದು ಇಲೆಕ್ಟ್ರಾನಿಕ್ ಸಾಧನವಾಗಿದ್ದು, ಅದು ಸಮತಲ ಮೇಲ್ಮೈನಿಂದ ಧೂಳು ಎತ್ತಲು ಸಕ್ಷನ್ ಬಲ (ಹೀರುಬಲ) ಬಳಸುತ್ತದೆ. ಈ ಸಾಧನಗಳಲ್ಲಿ ಇರುವಂತಹ ಗಾಳಿಯ ಪಂಪುಗಳು ಆಂಶಿಕ ನಿರ್ವಾತವನ್ನು ಸೃಷ್ಟಿಸಿ ಧೂಳನ್ನು ಹೀರಿಕೊಳ್ಳುತ್ತವೆ. ಹೀಗೆ ವ್ಯಾಕ್ಯೂಮ್ ಕ್ಲೀನರಿನಲ್ಲಿ ಸಂಗ್ರಹವಾದ ಕೊಳೆ ಮತ್ತು ಧೂಳು ಒಂದು ಚೀಲ (ಬ್ಯಾಗ್)ದಲ್ಲಿ ಅಥವಾ ಬ್ಯಾಗ್ ರಹಿತ ಸಂಗ್ರಾಹಕದಲ್ಲಿ ಸಂಗ್ರಹವಾಗುತ್ತವೆ. ಆದರೂ, ಬಾಗ್ ಇರುವ ವ್ಯಾಕ್ಯೂಮ್ ಕ್ಲೀನರಿನ ಸಮಸ್ಯೆಯೆಂದರೆ ಕೊಳೆಯಿರುವ ಗಾಳಿ ಮತ್ತೆ ಕೋಣೆಯೊಳಗೆ ತೇಲುತ್ತದೆ. ಈ ಸಮಸ್ಯೆಯನ್ನು ದೂರಮಾಡಲು, ನೀವು ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರ್ ಆಯ್ಕೆಮಾಡಿಕೊಳ್ಳಬಹುದು. ನಿಮ್ಮ ಆದ್ಯತೆಯನ್ನು ಅವಲಂಬಿಸಿ, ನೀವು ಕ್ಯಾನಿಸ್ಟರ್, ವೆಟ್ ಎಂಡ್ ಡ್ರೈ, ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರುಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಆಧುನಿಕ ವ್ಯಾಕ್ಯೂಮ್ ಕ್ಲೀನರುಗಳು HEPA ಫಿಲ್ಟರ್ ಒಳಗೊಂಡಿರುತ್ತವೆ ಹಾಗೂ ಇವು ಕುಗ್ಗಿದ ಧೂಳುಹೊರಹಾಕುವಿಕೆಯೊಂದಿಗೆ, ವಾಯುಮಾಲಿನ್ಯವನ್ನು ಕಡಿಮೆ ಮಾಡುವುದರ ಮೂಲಕ, ಸ್ವಚ್ಛ ಹಾಗೂ ಧೂಳು-ಮುಕ್ತ ಪರಿಸರವನ್ನು ಒದಗಿಸುತ್ತವೆ. ನಿಮಗೆ ಹಾಸಿಗೆಗಳು, ಸೋಫಾಗಳು, ಅಥವಾ ನೆಲಹಾಸುಗಳನ್ನು ಸ್ವಚ್ಛಮಾಡಬೇಕೆನಿಸಿದಾಗೆಲ್ಲ, ನಿಮ್ಮ ನಿರ್ದಿಷ್ಟ ಅಗತ್ಯಕ್ಕೆ ಅತ್ಯಂತ ಸೂಕ್ತವೆನಿಸುವ ವ್ಯಾಕ್ಯೂಮ್ ಕ್ಲೀನರ್ ಆಯ್ಕೆ ಮಾಡಿಕೊಳ್ಳಬಹುದು.

ವಿವಿಧ ರೀತಿಯ ವ್ಯಾಕ್ಯೂಮ್ ಕ್ಲೀನರ್ಸ್

ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್

ಪುಟ್ಟದಾದ ಮತ್ತು ಕಾಂಪ್ಯಾಕ್ಟ್ ಆಗಿರುವ ಈ ವ್ಯಾಕ್ಯೂಮ್ ಕ್ಲೀನರ್ ಕೈಯಲ್ಲಿ ಹಿಡಿಯಬಹುದಾಗಿದೆ ಮತ್ತು ಹಗುರವಾಗಿದೆ. ಅಗಲ ಕಿರಿದಾದ ಸ್ಥಳದಿಂದ ಕೊಳೆ ಮತ್ತು ಧೂಳು ತೆಗೆಯಲು ಈ ವ್ಯಾಕ್ಯೂಮ್ ಕ್ಲೀನರ್ ಸೂಕ್ತ. ಈ ಉಪಕರಣವು ನಿಮ್ಮ ಕಾರಿನ ಒಳಗೆ, ಹಾಸಿಲ್ಲದ ನೆಲ ಮತ್ತು ನಿಮ್ಮ ಅಪ್‌ಹೋಲೆಸ್ಟ್ರಿಯಲ್ಲಿರುವ ಸಾಕುಪ್ರಾಣಿಗಳ ರೋಮ, ಇತ್ಯಾದಿಗಳನ್ನು ಸ್ವಚ್ಛಮಾಡಲು ಸೂಕ್ತ.

ಕ್ಯಾನಿಸ್ಟರ್ ವ್ಯಾಕ್ಯೂಮ್ ಕ್ಲೀನರ್

ಕ್ಯಾನಿಸ್ಟರ್ ವ್ಯಾಕ್ಯೂಮ್ ಕ್ಲೀನರ್‌ಗಳು ಶಕ್ತಿಯುತ, ಹಗುರ ಹಾಗೂ ತೆಳ್ಳನೆಯ ವಿನ್ಯಾಸ ಹೊಂದಿವೆ. ಇವು ಹಾಸಿಲ್ಲದ ನಗ್ನ ನೆಲ, ಡ್ರೇಪ್ಸ್, ಮೆಟ್ಟಿಲುಗಳು ಮತ್ತು ಅಪ್‌ಹೋಲೆಸ್ಟ್ರಿ ಸ್ವಚ್ಛಗೊಳಿಸಲು ಸೂಕ್ತ. ಈ ವ್ಯಾಕ್ಯೂಮ್ ಕ್ಲೀನರಿನ ನಾಝಲ್ ಮತ್ತು ಹೋಸ್ ಅದನ್ನು ತಲಪಲು ಕಷ್ಟಸಾಧ್ಯವಾದ ಸ್ಥಳಗಳನ್ನು ಸ್ವಚ್ಛಗೊಳಿಸುವುದನ್ನೂ ಸುಲಲಿತವಾಗಿಸುತ್ತದೆ.

ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್

ಒಣ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಸೋರಿರುವ ದ್ರವವನ್ನೂ ಸುಲಭವಾಗಿ ಗುಡಿಸಿತೆಗೆಯುವ ಒಂದು ಅನುರೂಪವಾದ ವ್ಯಾಕ್ಯೂಮ್ ಕ್ಲೀನರ್. ನಿಮಗೆ ಬಿಸಿ ಟಬ್, ಕಟ್ಟಿರುವ ಸಿಂಕ್, ನೆಲಹಾಸು ಅಥವಾ ಅಗ್ಗಿಷ್ಟಕೆಯನ್ನು ಸ್ವಚ್ಛಗೊಳಿಸಬೇಕಿದ್ದಲ್ಲಿ, ನೀವು ವೆಟ್ ಎಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು.

ಶೂ ಸೋಲ್ ಕ್ಲೀನರ್

ಕೆಂಟ್ ಬ್ರ್ಯಾಂಡ್‌ನವರ ಒಂದು ಅತ್ಯಾಧುನಿಕ ವ್ಯಾಕ್ಯೂಮ್ ಕ್ಲೀನರ್ ಆಗಿರುವ ಶೂ ಸೋಲ್ ಕ್ಲೀನರ್ ನಿಮ್ಮ ಮನೆಯನ್ನು ಧೂಳು ಮತ್ತು ಕೊಳೆ ಮುಕ್ತವಾಗಿಸಲು ಅತ್ಯಂತ ಸೂಕ್ತ. ಈ ಕಾಂಪ್ಯಾಕ್ಟ್ ಸಾಧನವು ಕೊಳೆಯಾದ ಶೂ ಸೋಲ್ ಸ್ವಚ್ಛಗೊಳಿಸಿ ಒಳಾಂಗಣ ಪರಿಸರವನ್ನು ಶೂ ಧೂಳಿನಿಂದ ಮುಕ್ತವಾಗಿಸುತ್ತದೆ.

ಯಾವ ವ್ಯಾಕ್ಯೂಮ್ ಕ್ಲೀನರ್ ಖರೀದಿಸುವುದು?

ಅಂತಿಮ ನಿರ್ಧಾರ ಮಾಡುವುದಕ್ಕೂ ಮುನ್ನ, ನಿಮಗೆ ವಿವಿಧ ರೀತಿಯ ವ್ಯಾಕ್ಯೂಮ್ ಕ್ಲೀನರ್ಸ್ ಬಗ್ಗೆ ಸ್ಪಷ್ಟತೆ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಅಗತ್ಯಗಳನ್ನು ಅವಲಂಬಿಸಿ, ನೀವು ಬ್ಯಾಗ್ ಇರುವ ಅಥವಾ ಬ್ಯಾಗ್ ರಹಿತ, ಹ್ಯಾಂಡ್‌ಹೆಲ್ಡ್, ಕ್ಯಾನಿಸ್ಟರ್ ಅಥವಾ ತೇವ ಮತ್ತು ಶುಷ್ಕ ವ್ಯಾಕ್ಯೂಮ್ ಕ್ಲೀನರ್ಸ್ ಆಯ್ಕೆ ಮಾಡಬಹುದು. ಮನೆಯಲ್ಲಿ ನೆಲಹಾಸು ಹೊದೆಸಿರುವ ನೆಲವಿದ್ದಲ್ಲಿ, ನಿಮಗೆ ಅತ್ಯಂತ ಸೂಕ್ತ ವ್ಯಾಕ್ಯೂಮ್ ಕ್ಲೀನರ್ ಎಂದರೆ ಅಪ್‌ಹೋಲೆಸ್ಟ್ರಿ ವ್ಯಾಕ್ಯೂಮ್ ಕ್ಲೀನರ್. ಗಡಸು ಮರದ ನೆಲ ಮತ್ತು ಮೆಟ್ಟಿಲುಗಳನ್ನು ಸ್ವಚ್ಛಮಾಡಲು ಕ್ಯಾನಿಸ್ಟರ್ ವ್ಯಾಕ್ಯೂಮ್ ಕ್ಲೀನರ್ ಸೂಕ್ತ. ಹಗುರ ಕೆಲಸಗಳಿಗೆ ಮತ್ತು ತಲುಪಲು ಕಷ್ಟಸಾಧ್ಯವಾದ ಸ್ಥಾನಗಳಿಗೆ ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರುಗಳು ಸೂಕ್ತ.

ಕೆಂಟ್ ಉತ್ಪನ್ನ ಶ್ರೇಣಿ

ಧೂಳು ಮತ್ತು ಇತರ ಒಳಾಂಗಣದ ವಾಯುಮಾಲಿನ್ಯಕಾರಕಗಳನ್ನು ನಿವಾರಿಸುವ HEPA ತಂತ್ರಜ್ಞಾನದೊಂದಿಗೆ ಸಜ್ಜಾಗಿರುವ ಉತ್ತಮ ಗುಣಮಟ್ಟದ ವ್ಯಾಕ್ಯೂಮ್ ಕ್ಲೀನರುಗಳನ್ನು ಕೆಂಟ್ ಒದಗಿಸುತ್ತದೆ. ಅತ್ಯಾಧುನಿಕ ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರುಗಳು HEPA ಫಿಲ್ಟ್ರೇಶನ್ ತಂತ್ರಜ್ಞಾನ ಹೊಂದಿದ್ದು, ಅವು ಸ್ವಚ್ಛ, ಧೂಳು-ಮುಕ್ತ ಮತ್ತು ಕಲೆರಹಿತ ಪರಿಸರವನ್ನು ನಿರ್ಮಿಸುತ್ತವೆ. ವ್ಯಾಕ್ಯೂಮ್ ಕ್ಲೀನರಿನ ಅಧಿಕ ದಕ್ಷತೆಯುಳ್ಳ ಮೋಟರ್ ಕೋಣೆಯ ಮೂಲೆ ಮೂಲೆಗಳಿಂದಲೂ ಧೂಳು ಮತ್ತು ಕೊಳೆಯನ್ನು ಎತ್ತುತ್ತದೆ. ನಾವು ಬಲಶಾಲಿಯಾದ ಸೈಕ್ಲೋನಿಕ್ ತಂತ್ರಜ್ಞಾನ, HEPA ಫಿಲ್ಟರ್ಸ್ ಮತ್ತು UV ಲೈಟ್ ಡಿಸಿನ್ಫೆಕ್ಷನ್ ವ್ಯವಸ್ಥೆ ಬಳಸಿ ವ್ಯಾಕ್ಯೂಮ್ ಕ್ಲೀನರ್ ವಿನ್ಯಾಸ ಮಾಡಿದ್ದೇವೆ. ನಮ್ಮ ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಮನೆಬಳಕೆಗೆ ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರ್ ಆಗಿದ್ದು, ಇದು ಬ್ಯಾಕ್ಟೀರಿಯಾ, ಧೂಳು ಮತ್ತು ವೈರಸ್ಸುಗಳನ್ನು ಕೋಣೆಯಿಂದ ಹೊರಹಾಕುತ್ತದೆ ಮತ್ತು ಎಲ್ಲರಿಗೂ ಒಂದು ಸ್ವಚ್ಛ ಮತ್ತು ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸುತ್ತದೆ.

ಕೆಂಟ್ ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರುಗಳ ಶ್ರೇಣಿಯನ್ನೇ ಪ್ರಸ್ತುತ ಪಡಿಸುತ್ತಿದ್ದು, ಅವು ಹಗುರವೂ ಅತ್ಯಂತ ದಕ್ಷವೂ ಆಗಿವೆ. ಕೆಂಟ್‌ರವರ ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರುಗಳು ಅತ್ಯಾಧುನಿಕ ಸೈಕ್ಲೋನಿಕ್ ತಂತ್ರಜ್ಞಾನ ಮತ್ತು UV ಡಿಸಿನ್ಫೆಕ್ಷನ್ ದೀಪ ಬಳಸಿ ಸ್ವಚ್ಛ, ಧೂಳು-ಮುಕ್ತ ಮತ್ತು ಕಲೆ ರಹಿತ ಪರಿಸರವನ್ನು ನಿರ್ಮಿಸುತ್ತವೆ. UV ಡಿಸಿನ್ಫೆಕ್ಷನ್ ದೀಪಗಳು ಧೂಳಿನ ಕ್ರಿಮಿಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳನ್ನು ಪರಿಣಾಮಕಾರಿಯಾಗಿ ತೊಲಗಿಸುವುದರ ಮೂಲಕ ಅಲರ್ಜಿ ಮತ್ತು ಉಸಿರಾಟದ ಖಾಯಿಲೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ವ್ಯಾಕ್ಯೂಮ್ ಕ್ಲೀನರುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ ಮತ್ತು ನಿಮ್ಮ ಮನೆಯಿಂದ ಧೂಳು ಹಾಗೂ ಇತರ ಅಶುಚಿತ್ವದ ಅಂಶಗಳನ್ನು ನಿವಾರಿಸಿಕೊಳ್ಳಿ. ಸೋಫಾ, ಕಾರ್ಪೆಟ್, ಹಾಸಿಗೆ ಮತ್ತು ನಿಮ್ಮ ಒಳಾಂಗಣ ಪರಿಸರ ಸ್ವಚ್ಛತೆಗೆ ಕೆಂಟ್ ಬ್ರ್ಯಾಂಡ್ ವ್ಯಾಕ್ಯೂಮ್ ಕ್ಲೀನರ್ ಬಳಸಿ ಮತ್ತು ನಿಮ್ಮ ಮನೆಯನ್ನು ಇನ್ನಷ್ಟು ಆರೋಗ್ಯಕರ ಹಾಗೂ ಧೂಳು-ಮುಕ್ತವಾಗಿಸಿ. ವ್ಯಾಕ್ಯೂಮ್ ಕ್ಲೀನರುಗಳನ್ನು ನೀವು ನಮ್ಮ ವೆಬ್‌ಸೈಟ್‌ನಲ್ಲಿ ಅತ್ಯುತ್ತಮ ದರದಲ್ಲಿ ಖರೀದಿ ಮಾಡಬಹುದು.ಕೆಂಟ್ ವ್ಯಾಕ್ಯೂಮ್ ಕ್ಲೀನರ್ ಕುರಿತು

ಇಂದಿನ ಜಗತ್ತಿನಲ್ಲಿ ಆರೋಗ್ಯಪೂರ್ಣ ಒಳಾಂಗಣ ಪರಿಸರ ಒಂದು ಅವಶ್ಯಕತೆಯಾಗಿದೆ. ಆದರೆ ಹೆಚ್ಚುತ್ತಿರುವ ಒಳಾಂಗಣ ಮಾಲಿನ್ಯದೊಂದಿಗೆ, ಹೆಚ್ಚಿನ ಸಾಂಪ್ರದಾಯಿಕ ಸ್ವಚ್ಛತೆಯ ವಿಧಾನಗಳು ಪರಿಣಾಮಕಾರಿಯಾಗದೆ ಹೋಗಿವೆ. ಮಾಲಿನ್ಯಪೂರಿತ ಗಾಳಿಯನ್ನು ಹಿಡಿದಿಟ್ಟು, ತಾಜಾ ಹಾಗೂ ಪರಿಶುದ್ಧ ಗಾಳಿಯನ್ನು ಉಸಿರಾಡಲು ಅನುವು ಮಾಡಿಕೊಡುವಂತಹ ಒಂದು ಉಪಕರಣ ಎಲ್ಲರಿಗೂ ಬೇಕಾಗಿದೆ. ಅದಕ್ಕೆ ನೀವು ಕ್ರಾಂತಿಕಾರೀ ಸೈಕ್ಲೋನಿಕ್ ತಂತ್ರಜ್ಞಾನ ಬಳಸುವ ಕೆಂಟ್ ನ ವ್ಯಾಕ್ಯೂಮ್ ಕ್ಲೀನರ್ ಒಂದನ್ನು ಖರೀದಿಸುವುದು ಅಗತ್ಯ

ಬ್ರ್ಯಾಂಡ್ ಕೆಂಟ್ ಪ್ರಸ್ತುತ ಪಡಿಸುತ್ತಿರುವ ವಿನೂತನ ವ್ಯಾಕ್ಯೂಮ್ ಕ್ಲೀನರಿನಿಂದ ನಿಮ್ಮ ಮನೆ, ಕಛೇರಿಯ ಗಾಳಿಯನ್ನು ಪರಿಶುದ್ಧಗೊಳಿಸಿ. ಕೆಂಟ್ ಗಾಢವಾದ ಸೈಕ್ಲೋನಿಕ್ ತಂತ್ರಜ್ಞಾನವನ್ನು, HEPA ಫಿಲ್ಟರ್ಸ್ ಮತ್ತು UV ಲೈಟ್ ಡಿಸಿನ್ಫೆಕ್ಷನ್ ಸಿಸ್ಟಂ ಬಳಸಿ ವ್ಯಾಕ್ಯೂಮ್ ಕ್ಲೀನರ್ಸ್ ವಿನ್ಯಾಸ ಮಾಡಿದೆ. ಸೈಕ್ಲೋನಿಕ್ ವ್ಯಾಕ್ಯೂಮ್ ಕ್ಲೀನರ್ ಮನೆಯ ಬಳಕೆಗೆ ಅತ್ಯಂತ ಸೂಕ್ತವಾದುದು. ಏಕೆಂದರೆ ಅದು ಕೊಠಡಿಯಿಂದ ಬ್ಯಾಕ್ಟೀರಿಯಾ, ಧೂಳು ಮತ್ತು ವೈರಸನ್ನು ಇಲ್ಲವಾಗಿಸುತ್ತದೆ ಹಾಗೂ ಆ ಮೂಲಕ ಸರ್ವರಿಗೂ ಸ್ವಚ್ಛ ಹಾಗೂ ಆರೋಗ್ಯಪೂರ್ಣ ಪರಿಸರವನ್ನು ಖಚಿತಪಡಿಸುತ್ತದೆ.

ಧೂಳು ಹಿಡಿದಿಟ್ಟುಕೊಳ್ಳಲು ಬಳಸುವ ಭವಿಷ್ಯದ ಸೈಕ್ಲೋನಿಕ್ ತಂತ್ರಜ್ಞಾನ (ಫಿಲ್ಟ್ರೇಶನ್ ಬ್ಯಾಗ್ ಇಲ್ಲದೆ) ಮತ್ತು ಕೆಳಮಟ್ಟದ ಧೂಳು ಹಿಡಿಯಲು HEPA (ಹೈ ಎಫೀಶಿಯೆನ್ಸಿ ಪಾರ್ಟಿಕ್ಯುಲೇಟ್ ಅರೆಸ್ಟರ್) ಫಿಲ್ಟರ್ ಅದನ್ನು ಭಾರತದಲ್ಲಿ ಹಾಗೂ ಹಲವು ರಾಷ್ಟ್ರಗಳ ಉದ್ದಗಲಕ್ಕೂ ಅತ್ಯುತ್ತಮ ವ್ಯಾಕ್ಯೂಮ್ ಕ್ಲೀನರ್ ಆಗಿಸಿವೆ. ಬಲಶಾಲೀ ಸಕ್ಷನ್ ಫೋರ್ಸ್ ಇರುವ ಆಧುನಿಕ ಹೈ ಎಫೀಶಿಯೆನ್ಸಿ ಮೋಟರ್ ಇದರಲ್ಲಿದ್ದು, ಇದನ್ನು ಸಮರ್ಥವಾದ ಸ್ವಚ್ಛತೆಗಾಗಿ ಬಳಸಲಾಗುತ್ತದೆ. ಅದು ಚೊಕ್ಕದಾದ, ಸಮಕಾಲೀನ ವಿನ್ಯಾಸ ಮತ್ತು UV ಬೆಳಕಿನೊಂದಿಗೆ ಬರುತ್ತದೆ. ಅದು ಹಾಸಿಗೆ ಮತ್ತು ಅಪ್ಹೋಲೆಸ್ಟ್ರಿಗಳಿಂದ ಬ್ಯಾಕ್ಟೀರಿಯಾ, ಧೂಳು ಮತ್ತು ಶಿಲೀಂದ್ರಗಳನ್ನು ಕೊಲ್ಲುತ್ತದೆ.

ಈ ವ್ಯಾಕ್ಯೂಮ್ ಕ್ಲೀನರನ್ನು ಆನ್ಲೈನಿನಲ್ಲಿ ಖರೀದಿಸಿ ಮತ್ತು ಒಳಾಂಗಣದಲ್ಲಿರುವ ಧೂಳು ಹಾಗೂ ಇತರ ಅಶುದ್ಧವಸ್ತುಗಳನ್ನು ನಿವಾರಿಸಿ. ಕೆಂಟ್ ಬ್ರ್ಯಾಂಡ್ ವ್ಯಾಕ್ಯೂಮ್ ಕ್ಲೀನರ್ ಬಳಸಿ ಮತ್ತು ನಿಮ್ಮ ನೆಲಹಾಸು, ಸೋಫಾ, ಹಾಸಿಗೆ, ಮತ್ತುಒಳಾಂಗಣ ಪರಿಸರವನ್ನು ಸ್ವಚ್ಛ ಹಾಗೂ ಆರೋಗ್ಯಪೂರ್ಣವಾಗಿರಿಸಿ.

ಕೆಂಟ್ ವ್ಯಾಕ್ಯೂಮ್ ಕ್ಲೀನರ್ಸ್ ನ ಅನುಕೂಲಗಳು

ಕ್ರಾಂತಿಕಾರೀ ಸೈಕ್ಲೋನಿಕ್ ತಂತ್ರಜ್ಞಾನ

ಕೆಂಟ್ ವ್ಯಾಕ್ಯೂಮ್ ಕ್ಲೀನರ್ಸ್ ಹೈ ಎಫೀಶಿಯೆನ್ಸಿ ಮೋಟರ್ ಹಾಗೂ ಶಕ್ತಿಯುತ ಹೀರುವಿಕೆಗಾಗಿ ಮತ್ತು ಅಧಿಕ ಧೂಳು ಸಂಗ್ರಹ ಮತ್ತು ಕಲೆರಹಿತ ಶುಚಿಗೊಳಿಸುವಿಕೆಗೆ ಬ್ಯಾಗ್ ರಹಿತ ವ್ಯವಸ್ಥೆಯೊಂದಿಗೆ, ಸೈಕ್ಲೋನಿಕ್ ತಂತ್ರಜ್ಞಾನ ಬಳಸುತ್ತದೆ.

ಸೈಕ್ಲೋನಿಕ್ ಟೆಕ್ನಾಲಜಿ ವ್ಯಾಕ್ಯೂಮ್ ಕ್ಲೀನರ್ಸ್

ತಗ್ಗಿದ ವಾಯು ಮಾಲಿನ್ಯ

पಪ್ರಮಾಣಿತ HEPA ಫಿಲ್ಟರ್ಸ್ ಒಳಗೊಂಡಿರುವುದರಿಂದ ಧೂಳು ಮತ್ತು ಬ್ಯಾಕ್ಟೀರಿಯಾ ಮತ್ತೆ ಗಾಳಿಗೆ ಬಿಡುಗಡೆಯಾಗುವುದಿಲ್ಲ. ವಾಸ್ತವವಾಗಿ, ಸಂಗ್ರಹದ ಬ್ಯಾಗಿನಲ್ಲಿ ಸಂಗ್ರಹವಾದ ಧೂಳು ಮರಳಿ ವಾತಾವರಣಕ್ಕೆ ಹೋಗುವುದಿಲ್ಲ- ಇದು ಸಾಂಪ್ರದಾಯಿಕ ವ್ಯಾಕ್ಯೂಮ್ ಕ್ಲೀನರಿನಲ್ಲಿರದ ಒಂದು ವಿಶಿಷ್ಟ ಲಕ್ಷಣ.

HEPA ಫಿಲ್ಟರ್ ವ್ಯಾಕ್ಯೂಮ್ ಕ್ಲೀನರ್

UV ಸೋಂಕುನಿವಾರಣೆ

ಕೆಂಟ್ ವ್ಯಾಕ್ಯೂಮ್ ಕ್ಲೀನರುಗಳು ಬ್ಯಾಕ್ಟೀರಿಯಾ, ವೈರಸ್, ಧೂಳಿನ ಕ್ರಿಮಿಗಳನ್ನು ಚಪ್ಪಟೆ ಮೇಲ್ಮೈಗಳಿಂದ ಹೊರತೆಗೆಯಲು ಅಥವಾ ಕೊಂದುಹಾಕಲು ಶಕ್ತಿಯುತ UV ಲೈಟ್ ಡಿಸಿನ್ಫೆಕ್ಷನ್ ಸಿಸ್ಟಂ ಬಳಸುತ್ತವೆ ಹಾಗೂ ಈ ಮೂಲಕ ಒಳಾಂಗಣದ ಪರಿಸರವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಸುತ್ತವೆ.

UV ಡಿಸಿನ್ಫೆಕ್ಷನ್ ವ್ಯಾಕ್ಯೂಮ್ ಕ್ಲೀನರ್ಸ್

ರಾಷ್ಟ್ರವ್ಯಾಪಿ ಸೇವಾ ಜಾಲ

1500+ ಕ್ಕೂ ಮಿಗಿಲಾಗಿರುವ ಸರ್ವಿಸ್ ಪಾರ್ಟ್ನರ್ಸ್ ಇರುವ ಭಾರತದುದ್ದಕ್ಕೂ ವ್ಯಾಪಿಸಿರುವ, ವಿಶಾಲ ಸೇವಾ ಜಾಲ

ಭಾರತದಲ್ಲಿ ಕೆಂಟ್ ವ್ಯಾಕ್ಯೂಮ್ ಕ್ಲೀನರ್ಸ್ ಸೇವಾ ಪಾಲುದಾರರು

ಇತರ ಉತ್ಪನ್ನಗಳನ್ನು ಶೋಧಿಸಿ ನೋಡಿ

RO ವಾಟರ್ ಪ್ಯೂರಿಫೈಯರ್ಸ್

RO ವಾಟರ್ ಪ್ಯೂರಿಫೈಯರ್ಸ್

ಏರ್ ಪ್ಯೂರಿಫೈಯರ್ಸ್
 

ಅಡುಗೆಯ ಉಪಕರಣಗಳು (ಕುಕಿಂಗ್ ಅಪ್ಲಯನ್ಸಸ್)


ಕೆಂಟ್ ಅನುಕೂಲ
ಬೃಹತ್ ಮಾರಾಟ ಹಾಗೂ ಸೇವಾ ಜಾಲವಿರುವ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳು
ಅತ್ಯಧಿಕ ಪ್ರಮಾಣೀಕೃತ ಹಾಗೂ ಪುರಸ್ಕೃತ
ಅಸಂಖ್ಯಾತ ಪುರಸ್ಕಾರ ಹಾಗೂ ಪ್ರಮಾಣೀಕರಣಕ್ಕೆ ಭಾಜನವಾಗಿದೆ
ಮಿಲಿಯಗಟ್ಟಲೆ ಜನರ ವಿಶ್ವಾಸ ಗಳಿಸಿದೆ
ನಂ. 1 ಶ್ರೇಯಾಂಕಿತ, ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್
ಉಚಿತ ಡೆಮೋ ಕೇಳಿ

ಉಚಿತ ಡೆಮೋ ಕೇಳಿ

 
ಇದರಲ್ಲಿ ಆಸಕ್ತಿ ಇದೆ
ರದ್ದುಪಡಿಸಿ