ಕೆಂಟ್ ಟರ್ಬೋ ಗ್ರೈಂಡರ್ ಎಂಡ್ ಬ್ಲೆಂಡರ್​

ಬಿಸಿಮಾಡುವ ಕಾರ್ಯಾಚರಣೆಯೊಂದಿಗೆ ಬರುವ ಕೆಂಟ್ ಟರ್ಬೋ ಗ್ರೈಂಡರ್ ಎಂಡ್ ಬ್ಲೆಂಡರ್ ತಾಜಾ ಪಾನೀಯವನ್ನು ಮತ್ತು ಆಹಾರವನ್ನು ನಿಮಿಷಗಳಲ್ಲಿ ತಯಾರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. 12 ಪ್ರಿಸೆಟ್ ಫಂಕ್ಷನ್ಸ್ ಬಿಸಿ ಮತ್ತು ತಂಪು ಮಿಶ್ರಣ ಬ್ಲೆಂಡಿಂಗ್ ಮತ್ತು ಓವರ್ ಕರೆಂಟ್ ರಕ್ಷಣೆ ಮುಂತಾದ ಲಕ್ಷಣಗಳೊಂದಿಗೆ ಈ ಉಪಕರಣವು ನಿಮ್ಮ ಅಡುಗೆ ಮನೆಯ ಒಂದು ಅದ್ಭುತ ಶಕ್ತಿಯಾಗುತ್ತದೆ.

12 ಪೂರ್ವ ನಿಗದಿತ ಕಾರ್ಯಗಳೊಂದಿಗೆ ಕೆಂಟ್ ಟರ್ಬೋ ಗ್ರೈಂಡರ್ ಎಂಡ್ ಬ್ಲೆಂಡರ್

12 ಪ್ರಿಸೆಟ್ ಫಂಕ್ಷನ್ಸ್

ಟರ್ಬೋ ಗ್ರೈಂಡರ್ ಎಂಡ್ ಬ್ಲೆಂಡರ್ ನ 12 ಪ್ರಿಸೆಟ್ ಫಂಕ್ಷನ್ಸ್ ನಿಮಗೆ ಒಂದೇ ಸ್ಪರ್ಶದಲ್ಲಿ ಹಲವು ಬಗೆಯ ಆಹಾರ ಪದಾರ್ಥ ಮತ್ತು ಪಾನೀಯಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಅದು ದೋಸೆ ಹಿಟ್ಟು, ಐಸ್ ಪುಡಿಮಾಡುವುದು ಮತ್ತು ತಾಜಾ ಹಣ್ಣಿನ ರಸ ತಯಾರಿ, ಸ್ಮೂದೀಸ್, ಸೂಪುಗಳು, ಇತ್ಯಾದಿಗಳನ್ನು ತಯಾರಿಸುವ ಕಿರಿಕಿರಿಯನ್ನು ದೂರಮಾಡುತ್ತದೆ.

ಸುಲಭ ಕಾರ್ಯಾಚರಣೆಯ ಗ್ರೈಂಡರ್ ಬ್ಲೆಂಡರ್

ಸುಲಭ ಕಾರ್ಯಾಚರಣೆ

ಅದರ ದೊಡ್ಡದಾದ LCD ಡಿಸ್ಪ್ಲೇಯೊಂದಿಗೆ ನೀವು ಆಯ್ದ ಮೆನ್ಯು ಮತ್ತು ಸೆಲಿಶಿಯಸ್ ನಲ್ಲಿ ತಾಪಮಾನವನ್ನು ಪರೀಕ್ಷಿಸಬಹುದು. ಜೊತೆಗೆ ಅದು ಯಾವುದೇ ದೋಷಪೂರಿತ ಕೆಲಸಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನೂ ನೀಡುತ್ತದೆ.

ಅತಿಯಾಗಿ ಬಿಸಿಯಾಗುವುದನ್ನು ತಡೆಯುತ್ತದೆ

ಅತಿಯಾಗಿ ಬಿಸಿಯಾಗುವುದು ಮತ್ತು ಅತಿಯಾದ ವಿದ್ಯುತ್ ಹರಿವಿನಿಂದ ರಕ್ಷಣೆ

ಈ ವಿಶಿಷ್ಟ ಉಪಕರಣವು ಓವರ್ ಹೀಟ್ ಆಗುವುದನ್ನು ಮತ್ತು ಅತಿಯಾದ ವಿದ್ಯುತ್ ಪ್ರವಾಹವನ್ನು ತಡೆಗಟ್ಟುವುದರ ಮೂಲಕ ಅದನ್ನು ಬಳಸಲು ಯೋಗ್ಯವಾಗಿಸುತ್ತದೆ.

ಉನ್ನತ ವೇಗದ ಕೆಂಟ್ ಗ್ರೈಂಡರ್ ಎಂಡ್ ಬ್ಲೆಂಡರ್ ಮಶಿನ್

ಅಧಿಕ ವಿದ್ಯುತ್ ಮತ್ತು ವೇಗ

ಕೆಂಟ್ ಟರ್ಬೋ ಗ್ರೈಂಡರ್ ಎಂಡ್ ಬ್ಲೆಂಡರ್ ತ್ವರಿತ ಅರೆಯುವಿಕೆ ಮತ್ತು ಮಿಶ್ರ ಮಾಡುವಿಕೆಗಾಗಿ 30000 rpm ವೇಗದಲ್ಲಿ ಕೆಲಸಮಾಡುತ್ತದೆ. ಜೊತೆಗೆ ಉನ್ನತ ವರ್ಗದ ಜಪಾನೀ ಸ್ಟೇನ್ ಲೆಸ್ ಬ್ಲೇಡ್ಸ್ ಅರೆಯುವುದು ಮತ್ತು ಮಿಶ್ರ ಮಾಡುವುದನ್ನು ಸುಲಭವಾಗಿಸುತ್ತವೆ.

ಹೀಟಿಂಗ್ ಎಲಿಮೆಂಟ್ ಜೊತೆಗೆ ಗ್ರೈಂಡರ್ ಬ್ಲೆಂಡರ್

ಬಿಸಿಮಾಡುವ ಕ್ರಿಯೆ​

ವಿಶಿಷ್ಟವಾದ ಬಿಸಿಮಾಡುವ ಫಂಕ್ಷನ್ ಮೂಲಿಕಾ ಚಹಾ, ಸೋಯಾ ಹಾಲು, ಇತ್ಯಾದಿ ಬಿಸಿಯಾದ ಪಾನೀಯಗಳನ್ನು ಅದೇ ಹೂಜಿ (ಜಾರ್) ಯಲ್ಲಿ ಮಾಡಲು ನಿಮಗೆ ಅನುಮತಿಸುತ್ತದೆ.