HEPA ಏರ್ ಪ್ಯೂರಿಫೈಯರ್ಸ್

ಕೊಠಡಿಯ ಗಾಳಿಯನ್ನು ಶುದ್ಧ, ಆರೋಗ್ಯಪೂರ್ಣ ಮತ್ತು ಮಾಲಿನ್ಯ ಮುಕ್ತವಾಗಿಸುತ್ತದೆ​

ವಿಂಗಡಿಸು
ಫಿಲ್ಟರ್

ವಿಂಗಡಿಸಿ

ವಿಂಗಡಿಸಿ
   ಫಿಲ್ಟರ್
ಖಾಲಿ ಮಾಡು ಕ್ಲಿಯರ್

ದರ

INR 7990 - INR 25000

ವೈಶಿಷ್ಟ್ಯಗಳು

ಸಿಎಡಿಆರ್/CADR

ಕೊಠಡಿ ಗಾತ್ರ

ಅನ್ವಯಿಸು
 • ಕೆಂಟ್ ಆಲ್ಪ್ಸ್+ ಏರ್ ಪ್ಯೂರಿಫೈಯರ್


  ​ಒಂದು ಸುಧಾರಿತ HEPA ತಂತ್ರಜ್ಞಾನ ಆಧಾರಿತ ಏರ್ ಪ್ಯೂರಿಫೈಯರ್, ಒಳಾಂಗಣ ಗಾಳಿಯಲ್ಲಿ PM2.5 ಸಾಂದ್ರತೆಯನ್ನು ಪ್ರದರ್ಶಿಸಲು ರಿಯಲ್ ಟೈಮ್ ಏರ್ ಪ್ಯೂರಿಟಿ ಮಾನಿಟರ್ ನೊಂದಿಗೆ.  ಕೆಂಟ್ ಆಲ್ಪ್ಸ್+ ಏರ್ ಪ್ಯೂರಿಫೈಯರ್
  ಎಂ ಆರ್ ಪಿ: INR 25000/-
 • ಕೆಂಟ್ ಆಲ್ಪ್ಸ್ (KENT Alps)

  43 ಚದರ ಮೀಟರ್ ವರೆಗಿನ ಗಾತ್ರದ ಕೊಠಡಿಯಲ್ಲಿ ಸ್ಥಾಪನೆ ಮಾಡುವುದಕ್ಕೆ ಸೂಕ್ತ.​

  ಕೆಂಟ್ ಆಲ್ಪ್ಸ್ (KENT Alps)
  ಎಂ ಆರ್ ಪಿ: INR 21990/-
 • ಕೆಂಟ್ ಆರಾ (KENT Aura)

  27 ಚದರ ಮೀಟರ್ ವರೆಗಿನ ಗಾತ್ರದ ಕೊಠಡಿಯಲ್ಲಿ ಸ್ಥಾಪನೆ ಮಾಡುವುದಕ್ಕೆ ಸೂಕ್ತ.

  ಕೆಂಟ್ ಆರಾ (KENT Aura)
  ಎಂ ಆರ್ ಪಿ: INR 15990/-
 • ಕೆಂಟ್ ಎಟರ್ನಲ್

  ಈಗ ನಿಮ್ಮ ಕೊಠಡಿಯ ಗಾಳಿಯನ್ನು ಬ್ಯಾಕ್ಟೀರಿಯಾ-ಮುಕ್ತ, ಪರಿಶುದ್ಧ ಹಾಗೂ ಆರೋಗ್ಯಪೂರ್ಣವಾಗಿಸಿ

  ಕೆಂಟ್ ಎಟರ್ನಲ್
  ಎಂ ಆರ್ ಪಿ: INR 21990/-
 • ಕೆಂಟ್ ಮ್ಯಾಜಿಕ್ (KENT Magic)

  ಕಾರ್ ಕ್ಯಾಬಿನ್ನಿಗೆ ಸೂಕ್ತ​

  ಕೆಂಟ್ ಮ್ಯಾಜಿಕ್ (KENT Magic)
  ಎಂ ಆರ್ ಪಿ: INR 7990/-

ಹದಗೆಡುತ್ತಿರುವ ಗಾಳಿಯ ಗುಣಮಟ್ಟ

ಬಂಟಿ-ವಾಯು ಮಾಲಿನ್ಯದ ಮೇಲೆ ಒಂದು ಸಣ್ಣ ಕತೆ

ಬಂಟಿ-ವಾಯು ಮಾಲಿನ್ಯದ ಮೇಲೆ ಒಂದು ಸಣ್ಣ ಕತೆ

ಕೆಂಟ್ HEPA ಏರ್ ಪ್ಯೂರಿಫೈಯರ್ಸ್ ನ ಅಗತ್ಯ​

4 ಹಂತದ ಶುದ್ಧೀಕರಣ ಪ್ರಕ್ರಿಯೆ

ಕೆಂಟ್ ಏರ್ ಪ್ಯೂರಿಫೈಯರ್ ತೀವ್ರಗತಿಯ 4 ಹಂತಗಳ ಶುದ್ಧೀಕರಣ ಪ್ರಕ್ರಿಯೆಯ ಮೂಲಕ 0.3 ಮೈಕ್ರಾನ್ ವ್ಯಾಸಕ್ಕಿಂತಲೂ ಕಿರಿದಾಗಿರುವ ಶೇ.99.9 ರಷ್ಟು ಕಣಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ

ಮೊದಲ ಹಂತ: ಪ್ರಿ-ಫಿಲ್ಟರ್​

ರಕ್ಷಣೆಯ ಮೊದಲಿಗನಾಗಿ ಪ್ರಿ-ಫಿಲ್ಟರ್ ಗಾಳಿಯಿಂದ ದೊಡ್ಡ ಗಾತ್ರದ ಕಣಗಳನ್ನು ಮತ್ತು ಧೂಳಿನ ಕಣಗಳನ್ನು, ಉದಾಹರಣೆಗೆ ಜೇಡರ ಬಲೆ, ಮಾನವ ಅಥವಾ ಸಾಕು ಪ್ರಾಣಿಗಳ ಕೂದಲು, ಕಸ ಹಾಗೂ ಮರಳಿನ ಕಣಗಳನ್ನು ಅಧಿಕ ಸಾಮರ್ಥ್ಯದಿಂದ ಬಂಧಿಸಿಡುತ್ತದೆ.

ಎರಡನೆಯ ಹಂತ: ವಿಶೇಷ ಸಂರಚನೆಯ ಕಾರ್ಬನ್ ಫಿಲ್ಟರ್​

ಕೆಂಟ್ HEPA ಏರ್ ಪ್ಯೂರಿಫೈಯರುಗಳು ಜೇನುಗೂಡಿನಂತಹ ರಚನೆಯನ್ನು ಹೊಂದಿದ್ದು, ಅವು ವಿಶೇಷವಾದ ಆಕ್ಟಿವೇಟೆಡ್ ಕಾರ್ಬನ್ ನಿಂದ ತುಂಬಲ್ಪಟ್ಟಿವೆ. VOC, ದುರ್ವಾಸನೆ/ಕೆಟ್ಟ ಗಾಳಿ, ಅನಿಲಗಳಾದ ಹೈಡ್ರೊಜೆನ್ ಸಲ್ಫೈಡ್, H2S, ಹೈಡ್ರೋಕಾರ್ಬನ್ ಮತ್ತು ಫಾರ್ಮಾಲ್ಡಿಹೈಡ್, ಇತ್ಯಾದಿ ಮಾಲಿನ್ಯಕಾರಕಗಳನ್ನು ಕಾರ್ಬನ್ ಫಿಲ್ಟರ್ ಪರಿಣಾಮಕಾರಿಯಾಗಿ ಬಂಧಿಸಿಡುತ್ತದೆ. ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರಿನ ಜೀವಿತಾವಧಿಯನ್ನೂ ಹೆಚ್ಚಿಸುತ್ತದೆ.

ಮೂರನೆಯ ಹಂತ: ಆಂಟಿಬ್ಯಾಕ್ಟೀರಿಯಾ ಕೋಟ್ ಮಾಡಿರುವ HEPA ಫಿಲ್ಟರ್

ಅತ್ಯಾಧುನಿಕ ಜಪಾನೀ ತಂತ್ರಜ್ಞಾನವುಳ್ಳ ಆಂಟಿಬ್ಯಾಕ್ಟೀರಿಯಾ ಕೋಟ್ ಮಾಡಿರುವ HEPA ಫಿಲ್ಟರ್ ಶೇ.99 SPM, ಶಿಲೀಂದ್ರ, ಮುಂತಾದ 0.3ಮೈಕ್ರಾನಿನಷ್ಟು ಪುಟ್ಟ ಕಣಗಳನ್ನು ಹಿಡಿದಿಡುತ್ತದೆ. HEPA ಫಿಲ್ಟರ್ ಒಳಾಂಗಣದ ಕ್ಯಾನ್ಸರ್ ಕಾರಕ ಕಣಗಳಾದ PM 2.5, ಪರಾಗರೇಣು, ಅಲರ್ಜೆನ್ಸ್, ಶಿಲೀಂದ್ರ ಮತ್ತು ಸಿಗರೆಟ್ ಹೊಗೆಯ ಕಣಗಳನ್ನು ಸಹ ಹಿಡಿದಿಡುತ್ತದೆ

ನಾಲ್ಕನೆಯ ಹಂತ: ಅಯೊನೈಝರ್​

ಗಾಳಿಯಲ್ಲಿರುವ ಕಣಗಳಿಗೆ ಅಂಟಿಕೊಂಡಿರುವ ವಿದ್ಯುತ್ ಆವೇಶ ಹೊಂದಿರುವ ಅಯಾನುಗಳನ್ನು ಅಯೊನೈಝರ್ಸ್ ಪಸರಿಸುತ್ತವೆ ಹಾಗೂ ಈ ಮೂಲಕ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತವೆ. ಅಯಾನುಗಳು ಮಾಲಿನ್ಯಕಾರಕಗಳನ್ನು ಕೊಠಡಿಯೊಳಗೆ ಗೋಡೆಗಳಿಗೆ ಅಥವಾ ಇತರ ಮೇಲ್ಮೈಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ ಅಥವಾ ಅಯೊನೈಝಿಂಗ್ ಯುನಿಟಿನಲ್ಲಿರುವ ವಿದ್ಯುದಾವೇಶವಿರುವ ಸಂಗ್ರಹ ತಟ್ಟೆಯೊಂದರ ಮೇಲೆ ಬಂಧಿಸುತ್ತವೆ.

4 ಹಂತದ ಶುದ್ಧೀಕರಣ ಪ್ರಕ್ರಿಯೆ

ವಿಸ್ತೃತ ನೋಟವನ್ನು ತೆರೆಯಲು ಕ್ಲಿಕ್ ಮಾಡಿ

ಮೌನ ಕಾರ್ಯಾಚರಣೆ

ನೀವು ಹಾಗೂ ನಿಮ್ಮ ಕುಟುಂಬ ತಾಜಾ ಗಾಳಿಯನ್ನು ಉಸಿರಾಡಿ, ನೆಮ್ಮದಿಯಲ್ಲಿ ನಿದ್ರಿಸುವುದನ್ನು ಖಚಿತಪಡಿಸಲು, ಕೆಂಟ್ HEPA ಏರ್ ಪ್ಯೂರಿಫೈಯರ್ಸ್ ಅತ್ಯಂತ ಮೌನ ಕಾರ್ಯಾಚರಣೆಯನ್ನು ಹೊಂದಿದೆ. ನಿಮ್ಮ ಅನುಕೂಲವನ್ನು ಮನದಲ್ಲಿರಿಸಿಕೊಂಡು, ಕೆಂಟ್ HEPA ಏರ್ ಪ್ಯೂರಿಫೈಯರ್ಸ್ ಮೌನಕಾರ್ಯಾಚರಣೆಗಾಗಿ ಬ್ರಶ್-ರಹಿತ DC ಮೋಟರ್ಸ್ ಒಳಗೊಂಡಿವೆ. ಬ್ರಶ್ ರಹಿತ DC ಮೋಟರಿನ ಆಂತರಿಕ ಭಾಗಗಳು ಸಂಪೂರ್ಣವಾಗಿ ಆವರಿಸಲ್ಪಟ್ಟಿರುವುದರಿಂದ, ಕಾರ್ಯಾಚರಣೆಯ ಅವಧಿಯಲ್ಲಿ ಘರ್ಷಣೆಯ ಅಥವಾ ಎಲೆಕ್ಟ್ರಾನಿಕ್ ಸದ್ಧು ಇಲ್ಲ. ಇದರಿಂದ ಏರ್ ಪ್ಯೂರಿಫೈಯರ್ಸ್ ಬಳಕೆ ಅನುಕೂಲಕರವಾಗಿರುತ್ತದೆ.

ಮೌನ ಕಾರ್ಯಾಚರಣೆ
ಫಿಲ್ಟರ್ ಬದಲಾವಣೆ ಸೂಚಕ

ಕೆಂಟ್ ಏರ್ ಪ್ಯೂರಿಫೈಯರ್ಸ್ ಫಿಲ್ಟರ್ ರಿಪ್ಲೇಸ್ಮೆಂಟ್ ಇಂಡಿಕೇಟರಿನೊಂದಿಗೆ ಬರುತ್ತವೆ, ಇದು ಫಿಲ್ಟರ್ ಬದಲಿಸಬೇಕಾದಾಗ ಸ್ವಯಂಚಾಲಿತವಾಗಿ ಸೂಚನೆ ನೀಡುತ್ತದೆ. ಏರ್ ಪ್ಯೂರಿಫೈಯರ್ಸ್ ನೊಂದಿಗೆ ಜೋಡಿಸಲ್ಪಟ್ಟಿರುವ ಫಿಲ್ಟರ್ 2000 ಗಂಟೆಗಳ ವರೆಗೆ ನಡೆಯುತ್ತದೆ ಅಥವಾ ಅದು ಸಂಪೂರ್ಣವಾಗಿ ಫಿಲ್ಟರ್ ಮಾಡಲ್ಪಡುವ ಗಾಳಿಯ ಗುಣಮಟ್ಟದ ಮೇಲೆ ಹೊಂದಿಕೊಂಡಿರುತ್ತದೆ. ಏರ್ ಫಿಲ್ಟರ್ ಕ್ಷಮತೆಯನ್ನು ಕಳೆದುಕೊಂಡ ತಕ್ಷಣ ಫಿಲ್ಟರ್ ರಿಪ್ಲೇಸ್ಮೆಂಟ್ LED ಹೊಳೆಯಲಾರಂಭಿಸುತ್ತದೆ ಮತ್ತು ಇದುನೀವು ಫಿಲ್ಟರ್ ಬದಲಿಸಿ ಮರುಜೋಡಿಸಬೇಕೆಂಬ ಸೂಚನೆಯಾಗಿರುತ್ತದೆ.

ಫಿಲ್ಟರ್ ಬದಲಾವಣೆ ಸೂಚಕ

ಕೆಂಟ್ ಅನುಕೂಲಗಳು

ಮಾಲಿನ್ಯ ಪರಿವೀಕ್ಷಕ (ಪೊಲ್ಯೂಶನ್ ಮಾನಿಟರ್)

ಕೆಂಟ್ ನ ವಿಶಿಷ್ಟ ಮಾಲಿನ್ಯ ಪರಿವೀಕ್ಷಕದೊಂದಿಗೆ, ನೀವು ನಿಮ್ಮ ಕೊಠಡಿಯ ಮಾಲಿನ್ಯದ ಮಟ್ಟವನ್ನು ಅಳೆಯಬಹುದು. ಮಾಲಿನ್ಯ ಪರಿವೀಕ್ಷಕವು ಸುತ್ತಮುತ್ತಲಿನ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸುತ್ತದೆ ಮತ್ತು ಆ ಕ್ಷಣದ PM2.5 ಮೌಲ್ಯವನ್ನು ಪ್ರದರ್ಶಿಸುತ್ತದೆ. ಜೊತೆಗೆ ಈ ಸಾಧನವು ಪ್ರದರ್ಶಿಲಾದ ಮೌಲ್ಯಕ್ಕೆ ಬಣ್ಣಗಳನ್ನೂ ತೋರಿಸುವುದರ ಮೂಲಕ ಮಾಲಿನ್ಯದ ಮಟ್ಟವನ್ನೂ ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ಮಾಲಿನ್ಯದ ಮಟ್ಟವನ್ನು ಪರೀಕ್ಷಿಸಿ ನೋಡಲು, ನಮಗೆ ಇಲ್ಲಿಗೆ ಕರೆ ಮಾಡಿ +91-9278912345

ವಾಯು ಮಾಲಿನ್ಯ ಪರಿವೀಕ್ಷಕ
ಭಾರತದಲ್ಲಿ ತಯಾರಾದುದು

ಭಾರತದಲ್ಲಿ ವಿನ್ಯಾಸಗೊಂಡು, ಸಿದ್ಧಪಡಿಸಿರುವ HEPA ಏರ್ ಪ್ಯೂರಿಫೈಯರ್ಸ್ ನ ಏಕೈಕ ಬ್ರ್ಯಾಂಡ್, ಕೆಂಟ್. ಇದು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಂಡು ಗರಿಷ್ಠ ವಿನ್ಯಾಸವನ್ನು ಹೊಂದಿರುವುದಲ್ಲದೆ ಬಿಡಿಭಾಗಗಳು ಸದಾಸಿದ್ಧವಾಗಿ ಲಭ್ಯವಿರುವುದನ್ನು ಖಚಿತಪಡಿಸುತ್ತದೆ.

ರಾಷ್ಟ್ರವ್ಯಾಪಿ ಸೇವಾ ಜಾಲ

ಗ್ರಾಹಕರು ನಿರಂತರ ಹಾಗೂ ಸಮಸ್ಯಾರಹಿತ, ಮಾರಾಟ-ನಂತರದ ಸೇವೆ ಪಡೆಯುವುದನ್ನು ಖಚಿತಪಡಿಸಲು 1500+ಕ್ಕೂ ಮಿಕ್ಕಿದ ಸರ್ವಿಸ್ ಪಾರ್ಟ್ನರ್ಸ್ ಜೊತೆಗೆ, ರಾಷ್ಟ್ರದುದ್ದಗಲಕ್ಕೂ ವಿಶಾಲವಾಗಿ ಹರಡಿರುವ ಸೇವಾಜಾಲ...

ಕೆಂಟ್ ಸೇವಾ ಜಾಲ

ಕೆಂಟ್ ಅನುಕೂಲ
ಬೃಹತ್ ಮಾರಾಟ ಹಾಗೂ ಸೇವಾ ಜಾಲವಿರುವ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳು
ಅತ್ಯಧಿಕ ಪ್ರಮಾಣೀಕೃತ ಹಾಗೂ ಪುರಸ್ಕೃತ
ಅಸಂಖ್ಯಾತ ಪುರಸ್ಕಾರ ಹಾಗೂ ಪ್ರಮಾಣೀಕರಣಕ್ಕೆ ಭಾಜನವಾಗಿದೆ
ಮಿಲಿಯಗಟ್ಟಲೆ ಜನರ ವಿಶ್ವಾಸ ಗಳಿಸಿದೆ
ನಂ. 1 ಶ್ರೇಯಾಂಕಿತ, ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್
ಉಚಿತ ಡೆಮೋ ಕೇಳಿ

ಉಚಿತ ಡೆಮೋ ಕೇಳಿ

 
ಇದರಲ್ಲಿ ಆಸಕ್ತಿ ಇದೆ
ರದ್ದುಪಡಿಸಿ