HEPA ಏರ್ ಪ್ಯೂರಿಫೈಯರ್ಸ್

ಕೆಂಟ್ HEPA ಏರ್ ಪ್ಯೂರಿಫೈಯರ್ಸ್, ಪಾರ್ಟಿಕ್ಯುಲೇಟ್ ಮ್ಯಾಟರ್ (PM2.5), ಧೂಳು, ಸಾಕು ಪ್ರಾಣಿಗಳ ಕೂದಲು, ಫಾರ್ಮಲ್ಡಿಹೈಡ್, ಸಿಗರೆಟ್ ಹೊಗೆ, ಇವೇ ಮೊದಲಾದ ಮಲಿನಕಾರಕಗಳನ್ನು ಶೇ. 99.9 ರಷ್ಟು ನಿವಾರಿಸುವ HEPA ಧೂಳು ಸಂಗ್ರಹ ತಂತ್ರಜ್ಞಾನವನ್ನು ಬಳಸುತ್ತವೆ. HEPA ಫಿಲ್ಟರಿನ ಅಧಿಕ ಶುದ್ಧೀಕರಣ ಸಾಮರ್ಥ್ಯವು ಕೊಠಡಿಯನ್ನು ಕ್ಷಣಮಾತ್ರದಲ್ಲಿ ಶುದ್ಧೀಕರಿಸುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ HEPA ಏರ್ ಪ್ಯೂರಿಫೈಯರ್ಸ್

ಓಝೋನ್ ಏರ್ ಪ್ಯೂರಿಫೈಯರ್ಸ್

ಓಝೋನ್ ಡಿಸಿನ್ಫೆಕ್ಷನ್ ತಂತ್ರಜ್ಞಾನ ಬಳಸಿ ಒಳಾಂಗಣ ಗಾಳಿಯನ್ನು ಸ್ವಚ್ಛವಿರಿಸಲು ಕೆಂಟ್ ಓಝೋನ್ ಏರ್ ಪ್ಯೂರಿಫೈಯರ್ಸ್ ನೆರವಾಗುತ್ತವೆ. ಏರ್ ಪ್ಯೂರಿಫೈಯರ್ಸ್ ಒಂದು ಶಕ್ತಿಯುತವಾದ ಆಕ್ಸಿಡೈಸಿಂಗ್ ಏಜೆಂಟ್ ಅಗಿರುವ ಓಝೋನ್ ಉತ್ಪಾದನೆ ಮಾಡುತ್ತವೆ ಮತ್ತು ಅದು ಒಳಾಂಗಣ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ಬೆಸ್ಟ್ ಸೆಲಿಂಗ್ ಓಝೋನ್ ಏರ್ ಪ್ಯೂರಿಫೈಯರ್ಸ್

ಕೆಂಟ್ ಏರ್ ಪ್ಯೂರಿಫೈಯರ್ಸ್ ಏಕೆ ಖರೀದಿಸಬೇಕು

ಕೆಂಟ್ ನ ಏರ್ ಪ್ಯೂರಿಫೈಯರ್ಸ್ ಉತ್ಪನ್ನ ಶ್ರೇಣಿಯು ಒಳಾಂಗಣ ಗಾಳಿಯನ್ನು ಮಾಲಿನ್ಯರಹಿತವಾಗಿಸಲು ಕ್ರಾಂತಿಕಾರೀ HEPA ಏರ್ ಪ್ಯೂರಿಫಿಕೇಶನ್ ಮತ್ತು ಓಝೋನ್ ಡಿಸಿನ್ಫೆಕ್ಷನ್ ತಂತ್ರಜ್ಞಾನಗಳನ್ನು ಬಳಸುತ್ತದೆ. ಅನುಕೂಲಕ್ಕಾಗಿ, ನಾವು ಗೋಡೆಯ ಮೇಲೆ ಏರಿಸಬಹುದಾದ ಹಾಗೂ ಮೇಜಿನ ಮೇಲೆ ಇರಿಸಬಹುದಾದಂತಹ ರೂಮ್ ಏರ್ ಪ್ಯೂರಿಫೈಯರ್ಸ್ ವಿನ್ಯಾಸ ಮಾಡಿದ್ದೇವೆ.

ಜಪಾನಿನ ಏರ್ ಪ್ಯೂರಿಫಿಕೇಶನ್ ತಂತ್ರಜ್ಞಾನದೊಂದಿಗೆ, ನಮ್ಮ ಮನೆ, ಕಛೇರಿ, ಮತ್ತು ಕಾರ್- ಇವುಗಳನ್ನು ಆರೋಗ್ಯಪೂರ್ಣ ವಾಗಿಸಲು ನಾವು ಭಾರತದಲ್ಲಿ ಅತ್ಯುತ್ತಮ ಏರ್ ಪ್ಯೂರಿಫೈಯರ್ಸ್ ಒದಗಿಸುತ್ತಿದ್ದೇವೆ. ನಮ್ಮ ರೂಮ್ ಕ್ಲೀನರ್ಸ್ ಶ್ರೇಣಿಯು ಧೂಳು, PM2.5, ಬ್ಯಾಕ್ಟೀರಿಯಾ ಮತ್ತು ಇತರ ವಾಯು ಮಾಲಿನ್ಯ ಕಾರಕಗಳನ್ನು ನಿವಾರಿಸುವುದರ ಮೂಲಕ ಒಳಾಂಗಣದ ಗಾಳಿಯನ್ನು ಶೇ.99.9 ರಷ್ಟು ನಿಖರವಾಗಿ ಶುದ್ಧೀಕರಿಸುತ್ತದೆ. ಭಾರತದಲ್ಲಿ, ನಿಮ್ಮ ಮನೆಗೆ ಅತ್ಯುತ್ತಮ ಏರ್ ಪ್ಯೂರಿಫೈಯರನ್ನು ಕೆಂಟ್ ವೆಬ್ ಸೈಟ್ ನಲ್ಲಿ ಆನ್ಲೈನ್ ಖರೀದಿ ಮಾಡಬಹುದು. ನಾವು 1999ರಿಂದ ಒಂದು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದೇವೆ.

  • ದೆಹಲಿ, ಬೆಂಗಳೂರು, ಮುಂಬಯಿ, ಗುರ್ಗಾಂವ್ ಇತ್ಯಾದಿ, ಹೆಚ್ಚಿನ ಮಾಲಿನ್ಯಕ್ಕೊಳಗಾಗಿರುವ ಭಾರತೀಯ ನಗರಗಳಲ್ಲಿ ಪರಿಣಾಮಕಾರಿ.
  • ಅತ್ಯಂತ ದಕ್ಷ ಹಾಗೂ ಕಡಿಮೆ ನಿರ್ವಹಣೆಯ ಹೋಮ್ ಏರ್ ಕ್ಲೀನರ್, CE ಪ್ರಮಾಣೀಕರಣದೊಂದಿಗೆ.
  • ಸ್ಮಾಗ್, ಬಿರುಗಾಳಿ, ಮನೆ ಕಟ್ಟುವ ಸ್ಥಳಗಳು, ಹಬ್ಬಹರಿದಿನಗಳು, ಛಳಿಗಾಲ, ಇತ್ಯಾದಿ ಸಮಯಗಳಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ.
  • ಏರ್ ಕ್ಲೀನರ್ ಕುರಿತಾದ “ಹೇಗೆ ಮಾಡುವುದು” ತಿಳಿದುಕೊಳ್ಳಲು ನಮ್ಮ ಏರ್ ಪ್ಯೂರಿಫೈಯರ್ಸ್ ಖರೀದಿ ಮಾರ್ಗದರ್ಶಿಯನ್ನು ಓದಿರಿ.

ಕೆಂಟ್ ಏರ್ ಪ್ಯೂರಿಫೈಯರಿನಿಂದ ನಿವಾರಿಸಿದ ವಾಯು ಮಾಲಿನ್ಯಕಾರಕಗಳು.

PM2.5

ಪಾರ್ಟಿಕ್ಯುಲೇಟ್ ಮ್ಯಾಟರ್ (PM) 2.5 ಎಂದರೆ ಗಾಳಿಯಲ್ಲಿ ತೂಗುಹಾಕಲ್ಪಟ್ಟಿರುವ ಅತ್ಯಂತ ಸಣ್ಣ ಕಣಗಳು. ಅವುಗಳ ವ್ಯಾಸ 2.5 ಮೈಕ್ರೋಮೀಟರ್ ಅಥವಾ ಅದಕ್ಕಿಂತಲೂ ಕಡಿಮೆ ಇರುತ್ತದೆ. ಈ ಕಣಗಳು ಮಾನವನ ಬರಿಕಣ್ಣಿಗೆ ಕಾಣದಂತಹವು ಮತ್ತು ಅವು ನೇರವಾಗಿ ಮಾನವರ ಶ್ವಾಸಕೋಶದೊಳಗೆ ಪ್ರವೇಶಿಸುತ್ತವೆ. ಇದು ಕಣ್ಣು, ಗಂಟಲು ಕಿರಿಕಿರಿ ಉಂಟುಮಾಡುವುದಲ್ಲದೆ, ಉಸಿರಾಟದ ಏರುಪೇರು, ಕೆಮ್ಮು, ಕುಗ್ಗಿದ ಶ್ವಾಸಕೋಶ ಕಾರ್ಯಕ್ಷಮತೆ, ಅನಿಯಮಿತ ಹೃದಯ ಬಡಿತ, ಆಸ್ತಮಾ, ಮತ್ತು ಹೃದಯಾಘಾತವನ್ನೂ ತರಬಹುದು.

ಮನೆಗಾಗಿ ಇರುವ ಕೆಂಟ್ ಏರ್ ಪ್ಯೂರಿಫೈಯರ್ಸ್ ಹೈ ಎಫೀಶಿಯೆನ್ಸಿ ಪಾರ್ಟಿಕ್ಯುಲೇಟ್ ಅರೆಸ್ಟರ್ (HEPA) ಫಿಲ್ಟರ್ ಏರ್ ಪ್ಯೂರಿಫಿಕೇಶನ್ ಹಂತದ ಮೂಲಕ PM2.5 ಯನ್ನು ನಿವಾರಿಸಿ ಉಸಿರಾಡುವ ಗಾಳಿಯನ್ನು ಒದಗಿಸುತ್ತದೆ. ಪಾರ್ಟಿಕ್ಯುಲೇಟ್ ಮ್ಯಾಟರ್ 2.5 ಅಥವಾ ಅದಕ್ಕಿಂತಲೂ ಪುಟ್ಟದಾದ, 0.3 ಮೈಕ್ರಾನ್ ಗಾತ್ರದ ವರೆಗಿನ ಕಣಗಳನ್ನು ಫಿಲ್ಟರ್ ಶೇ 99.9 ದಕ್ಷಯೊಂದಿಗೆ ಹಿಡಿದಿಡುತ್ತದೆ

ಧೂಳು

ಧೂಳು ಕಟ್ಟಡಗಳ ರಚನೆ, ಹೂದೋಟ, ಔದ್ಯಮಿಕ ಚಟುವಟಿಕೆಗಳು, ಸ್ವಾಭಾವಿಕ ಶಿಲೆಗಳು, ಮರಳು, ಮಣ್ಣಿನ ಸವಕಳಿ, ಇತ್ಯಾದಿಗಳ ಮೂಲಕ ಸೃಷ್ಟಿಯಾಗುವ ಸಾಮಾನ್ಯ ವಾಯುಮಾಲಿನ್ಯಕಾರಕವಾಗಿದೆ. ಮೂಗು ಹಾಗೂ ಗಂಟಲಿನ ಕಿರಿಕಿರಿ, ಕೆಮ್ಮು, ಉಸಿರಾಟದ ತೊಂದರೆ, ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕುಗ್ಗಿಸುವುದು, ಅನಿಯಮಿತ ಹೃದಯ ಬಡಿತ , ಆಸ್ತಮಾ ಮತ್ತು ಇತರ ರೋಗಗಳಿಗೆ ಇರುವ ಹಲವು ಕಾರಣಗಳಲ್ಲಿ ಮುಖ್ಯವಾದುದು ಗಾಳಿಯಲ್ಲಿರುವ ಧೂಳು.

ಕೆಂಟ್ ಭಾರತಕ್ಕಾಗಿ ಹಲವು ಹಂತಗಳಲ್ಲಿ ಧೂಳಿನ ಕಣಗಳನ್ನು ನಿವಾರಿಸುವ ಏರ್ ಪ್ಯೂರಿಫೈಯರ್ಸ್ ವಿನ್ಯಾಸ ಮಾಡಿದೆ. ಧೂಳಿನ ಕಣಗಳು ಫಿಲ್ಟರ್-ಪೂರ್ವ ಹಂತದಲ್ಲಿ ಹಿಡಯಲ್ಪಡುತ್ತದೆ, ಇನ್ನಷ್ಟು ಸಣ್ಣ ಧೂಳಿನ ಕಣಗಳು HEPA ಫಿಲ್ಟರ್ ಹಂತದಲ್ಲಿ ಸಿಲುಕಿಕೊಳ್ಳುತ್ತವೆ ಹಾಗೂ ಅಂತಿಮವಾಗಿ ತಾಜಾ ಮತ್ತು ಪರಿಶುದ್ಧ ಗಾಳಿ ಹೊರಬರುತ್ತದೆ.

ಸಾಕು ಪ್ರಾಣಿಗಳ ಕೂದಲು​

ಪ್ರಾಣಿಗಳ ರೋಮ, ಕೂದಲು, ನಾಯಿ ಉದುರಿಸುವ ತ್ವಚೆಯ ಸಣ್ಣ ತುಂಡುಗಳು, ಅವುಗಳ ಬೆವರು, ಜೊಲ್ಲು, ಇತ್ಯಾದಿಗಳ ಮೂಲಕ ಹೊರಬರುವ ಅಲರ್ಜಿಕಾರಕ ಪ್ರೋಟೀನುಗಳು, ಇವೇ ಮೊದಲಾದವುಗಳು ಸಾಕುಪ್ರಾಣಿಗಳಿರುವ ಮನೆಯಲ್ಲಿ ಕಂಡುಬರುವ ಸಾಮಾನ್ಯ ವಾಯುಮಾಲಿನ್ಯಕಾರಕಗಳು. ಸುಲಭವಾಗಿ ತುತ್ತಾಗುವ ಕುಟುಂಬದ ಸದಸ್ಯರಲ್ಲಿ ಇದು ಅಲರ್ಜಿ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತದೆ. ಅದು ವೈದ್ಯಕೀಯ ಸಂಕೀರ್ಣತೆಗಳಾದ ಆಸ್ತಮಾ, ಕೆಮ್ಮು ಹಾಗೂ ಸೀನು, ತಲೆಸುತ್ತುವಿಕೆ, ಆಲಸ್ಯ, ಕಣ್ಣಿನಲ್ಲಿ ನೀರು, ಉಸಿರಾಟದ ಸಮಸ್ಯೆ, ಪಚನಕ್ರಿಯೆಯ ಸಮಸ್ಯೆಗಳು ಮತ್ತು ಇತರ ಹಲವು ಸಂಕೀರ್ಣತೆಗಳನ್ನು ತರುತ್ತದೆ.

ಎಲ್ಲರಿಗೂ ಆರೋಗ್ಯಪೂರ್ಣ ಜೀವನ ನೀಡಲು, ಕೆಂಟ್ ಸಾಕುಪ್ರಾಣಿಗಳು ತರುವ ವಾಯುಮಾಲಿನ್ಯವನ್ನು ನಿವಾರಿಸುವ ಮತ್ತು ಸ್ವಚ್ಛ ಗಾಳಿಯನ್ನು ಒದಗಿಸುವ ಏರ್ ಕ್ಲೀನರ್ಸ್ ರಚಿಸಿದೆ. ಬಹು ಹಂತ ಶುದ್ಧೀಕರಣ ಪ್ರಕ್ರಿಯೆಯಲ್ಲಿ, ಪ್ರಿ-ಫಿಲ್ಟರ್ ಸಾಕುಪ್ರಾಣಿಗಳ ಕೂದಲು ಮತ್ತು ಇತರ ಭೌತಿಕ ಮಾಲಿನ್ಯಕಾರಕಗಳನ್ನು ಹಿಡಿದಿಡುತ್ತದೆ. ಜೊತೆಗೆ, ಆಂಟಿಬ್ಯಾಕ್ಟೀರಿಯಲ್ ಕೋಟಿಂಗ್ ಗಾಳಿಯಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾ ಮತ್ತು ವೈರಸ್ಸನ್ನು ನಿಷ್ಕ್ರಿಯವಾಗಿಸುತ್ತದೆ.

ಸಿಗರೆಟ್ ಹೊಗೆ

ಸಿಗರೆಟ್ ಹೊಗೆ ಎರಡು ವರ್ಗದ ವಾಯುಮಾಲಿನ್ಯಕಾರಕಗಳನ್ನು ಒಳಗೊಂಡಿರುತ್ತದೆ, ಬರಿಗಣ್ಣಿಗೆ ಕಾಣುವ, ಹೊಗೆ ಎಂದು ಕರೆಯಲ್ಪಡುವ PM2.5 ಕಣಗಳು, ಮತ್ತು ಕಾರ್ಬನ್ ಮಾನಾಕ್ಸೈಡ್ ಮತ್ತು ಬೆನ್ಜೀನ್ ನಂತಹ ಕಣ್ಣಿಗೆ ಕಾಣದ ಅನಿಲಗಳು. ಸಿಗರೆಟ್ ಹೊಗೆ (ಕ್ರಿಯಾಶೀಲವಾಗಿ ಅಥವಾ ಕ್ರಿಯಾರಹಿತವಾಗಿ) ನೇರವಾಗಿ ಮಾನವ ಶಾಸ್ವಕೋಶಕ್ಕೆ ಹಾನಿಯನ್ನುಂಟುಮಾಡುತ್ತದೆ. ಮತ್ತು ಕೆಮ್ಮು, ಉಸಿರು ಕಟ್ಟುವುದು, ಅನಿಯಮಿತ ಹೃದಯಬಡಿತ, ಆಸ್ತಮಾ, ಕ್ಯಾನ್ಸರ್ ಮತ್ತು ಇತರ ಹಲವು ಖಾಯಿಲೆಗಳನ್ನುಂಟುಮಾಡುತ್ತದೆ.

ಮನೆ ಬಳಕೆಗಾಗಿ ಭಾರತದಲ್ಲಿ ಕೆಂಟ್ ಅತ್ಯುತ್ತಮ ಏರ್ ಪ್ಯೂರಿಫೈಯರ್ಸ್ ವಿನ್ಯಾಸಮಾಡಿದೆ. ಇದು ಕಾರ್ಬನ್ ಫಿಲ್ಟರ್ ಹಂತದಲ್ಲಿ ಕಣ್ಣಿಗೆ ಕಾಣದ ಅನಿಲ (ಸಿಗರೆಟ್ ವಾಸನೆ)ಗಳನ್ನು ಮತ್ತು ಬರಿಗಣ್ಣಿಗೆ ಕಾಣುವಂತಹ ಹೊಗೆ (PM2.5)ಯನ್ನು HEPA ಫಿಲ್ಟರ್ ಹಂತದಲ್ಲಿ ಹಿಡಿದಿಟ್ಟು ಸಿಗರೆಟ್ ಹೊಗೆಯನ್ನು ಶುದ್ಧೀಕರಿಸುತ್ತದೆ ಹಾಗು ನೀವು ಮತ್ತು ನಿಮ್ಮ ಕುಟುಂಬ ಉಸಿರಾಡುವ ಗಾಳಿಯನ್ನು ಪರಿಶುದ್ಧವಾಗಿಸುತ್ತದೆ.

ಅಡುಗೆ ಧೂಮ

ಅಡುಗೆಯ ಧೂಮ ನೈಟ್ರೊಜೆನ್ ಡೈಆಕ್ಸೈಡ್ ಉತ್ಪಾದಿಸುತ್ತದೆ, ಅದರ ಅಡ್ಡಪರಿಣಾಮಗಳು ಯಾವುದೇ ತ್ಯಾಜ್ಯ ವಸ್ತು ದಹಿಸುವ ಕ್ರಿಯೆಗೆ ಸಮನಾಗಿರುತ್ತದೆ. ಸರಿಯಾದ ವಾತಾಯನ ವ್ಯವಸ್ಥೆಯಿಲ್ಲದ ಮನೆಯ ಅಡುಗೆ ಧೂಮವು ಮೊದಲಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉಸಿರಾಟದ ಸಮಸ್ಯೆಗಳನ್ನು ತರುತ್ತದೆ ಹಾಗೂ ಸೀನು, ಕೆಮ್ಮು, ಅನಿಯಮಿತ ಹೃದಯಬಡಿತ, ಆಸ್ತಮಾ ಮತ್ತು ಇನ್ನೂ ಹಲವಾರು ತೊಂದರೆಗಳನ್ನುಂಟುಮಾಡುತ್ತದೆ.

ಅಡುಗೆ ಮನೆಯಲ್ಲಿ ದಿನನಿತ್ಯದ ಅಡುಗೆಯ ಸಮಯದಲ್ಲಿ ಉತ್ಪಾದನೆಯಾಗುವ ಹಾನಿಕಾರಕ ಅನಿಲಗಳನ್ನು ಹೀರುವಂತಹ ಏರ್ ಪ್ಯೂರಿಫೈಯರ್ಸ್ ಯಂತ್ರಗಳನ್ನು ಕೆಂಟ್ ಪ್ರಸ್ತುತಪಡಿಸುತ್ತದೆ. ಏರ್ ಪ್ಯೂರಿಫಿಕೇಶನ್ ಪ್ರಕ್ರಿಯೆಯ ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರ್ ಹಂತದಲ್ಲಿ ಅನಿಲಗಳು ಶುದ್ಧೀಕರಿಸಲ್ಪಡುತ್ತವೆ.

ಪೇಂಟ್ ಧೂಮ​

ಪೇಂಟ್ ಧೂಮದ ಮಾಲಿನ್ಯವು ಮನೆಗೆ ವೈಟ್ ವಾಶ್ ಕೊಡುವಾಗ ಅಥವಾ ಹೊಸ ಪೀಠೋಪಕರಣಗಳು ಮನೆಗೆ ತಂದಾಗ ಅನುಭವಕ್ಕೆ ಬರುತ್ತದೆ. ಪೇಂಟಿನಲ್ಲಿ ಗಾಳಿಗೆ ಬಿಡುಗಡೆಯಾಗುವ ಅನಿಲಗಳನ್ನು ಹೊಂದಿರುವ ರಾಸಾಯನಿಕಗಳಿವೆ. ಇದನ್ನು ಕೆಟ್ಟ ವಾಸನೆಯಾಗಿ ಗುರುತಿಸಬಹುದು. ಪೇಂಟಿನ ಧೂಮ ಮಕ್ಕಳಲ್ಲಿ, ವಯೋವೃದ್ಧರಲ್ಲಿ ಮತ್ತು ಉಸಿರಾಟದ ತೊಂದರೆಯಿರುವ ಜನರಲ್ಲಿ ಅಲರ್ಜಿ, ಆಸ್ತಮಾ ಪ್ರತಿಕ್ರಿಯೆಗಳು, ತಲೆನೋವು, ತ್ವಚೆಯ ಇರುಸುಮುರುಸು, ಇತ್ಯಾದಿಗಳನ್ನು ತರಬಹುದು.

ಕೆಂಟ್ ಕಡಿಮೆ ನಿರ್ವಹಣೆ ಅವಶ್ಯವಿರುವ, ಏರ್ ಪ್ಯೂರಿಫೈಯರ್ ವಿನ್ಯಾಸಗೊಳಿಸಿದ್ದು, ಅದು ಎರಡನೆ ಹಂತದ ಏರ್ ಪ್ಯೂರಿಫಿಕೇಶನ್ ನಲ್ಲಿ ಹಾನಿಕಾರಕ ಪೇಂಟಿನ ವಾಸನೆಯನ್ನು ನಿವಾರಿಸುತ್ತದೆ. ಆಕ್ಟಿವೇಟೆಡ್ ಕಾರ್ಬನ್/ಕೆಟಲಿಟಿಕ್ ಕಾರ್ಬನ್ ಅಡ್ಸಾರ್ಬೆಂಟ್ ಫಿಲ್ಟರ್ ಪೇಂಟಿನ ವಾಸನೆಯನ್ನು ಗಾಳಿಯಿಂದ ಹೀರಿಕೊಂಡು ತಾಜಾ ಗಾಳಿಯನ್ನು ಮತ್ತೆ ಹೊರಕ್ಕೆ ಬಿಡುಗಡೆ ಮಾಡುತ್ತದೆ.

ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು

ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಕಣ್ಣಿಗೆ ಕಾಣಿಸದ ಜೀವಿಗಳಾಗಿದ್ದು, ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಪಯಣಿಸುತ್ತವೆ. ಅವು ಸಾಂಕ್ರಾಮಿಕ ರೋಗಗಳನ್ನು ತರಬಹುದು. ಅವು ಅಸಂಖ್ಯಾತ ಸಾಮಾನ್ಯ ಖಾಯಿಲೆಗಳಾದ ಕೆಮ್ಮು, ನೆಗಡಿ, ಇನ್ಫ್ಲುಯೆನ್ಜಾ, ಇತ್ಯಾದಿಗಳು ಮಾತ್ರವಲ್ಲದೆ, ಗಂಭೀರ ಖಾಯಿಲೆಗಳನ್ನೂ ತರಬಹುದು.

ಕೆಂಟ್, ಗಾಳಿಯನ್ನು ಸೋಂಕುರಹಿತವನ್ನಾಗಿಸುವ ಏರ್ ಪ್ಯೂರಿಫೈಯಿಂಗ್ ಮಶಿನುಗಳನ್ನು ವಿನ್ಯಾಸಗೊಳಿಸಿದೆ. ಏರ್ ಪ್ಯೂರಿಫೈಯರಿನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಕೋಟಿಂಗ್ ಗಾಳಿಯಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನುಹಿಡಿದಿಡುತ್ತದೆ ಮತ್ತು ಸುರಕ್ಷಿತ ಗಾಳಿಯನ್ನು ಹೊರಗೆಸೆಯುತ್ತದೆ.

ವಾಸನೆ

ಕೆಟ್ಟ ವಾಸನೆ ಹಾಗೂ ಧೂಮ ವಿಭಿನ್ನ ರಾಸಾಯನಿಕ ಕ್ರಿಯೆ, ಔದ್ಯಮಿಕ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಹಾಗೂ ಕೊಳೆಯುವಿಕೆಯ ಮೂಲಕ ಸೃಷ್ಟಿಯಾಗುತ್ತದೆ. ದುರ್ವಾಸನೆಯು ಮೂಗಿನಲ್ಲಿ ಕಿರಿಕಿರಿ, ತಲೆನೋವು, ಸೀನು ಹಾಗೂ ಇರುಸುಮುರುಸನ್ನು ಉಂಟುಮಾಡುತ್ತದೆ.

ಮನೆಗಾಗಿ ಮಾಡಿರುವ ಕೆಂಟ್ ಏರ್ ಕ್ಲೀನಿಂಗ್ ಮೆಶಿನ್ಸ್ ಗಾಳಿಯಿಂದ ವಾಸನೆಯನ್ನು ನಿವಾರಿಸುವ ಶಕ್ತಿಯುತ ಕಾರ್ಯಾಚರಣೆಯನ್ನು ಹೊಂದಿದೆ. ಗಾಳಿಯು ಆಕ್ಟಿವೇಟೆಡ್ ಕಾರ್ಬನ್ ಮೂಲಕ ಹಾಯುವಾಗ ಅನಿಲಗಳು/ದುರ್ವಾಸನೆ ಹಿಡಿಯಲ್ಪಡುತ್ತದೆ ಮತ್ತು ಕೇವಲ ತಾಜಾ ಗಾಳಿ ಮಾತ್ರ ವಾತಾವರಣಕ್ಕೆ ಮರಳುತ್ತದೆ.